Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕತ್ತಿಯಿಂದ ಪತ್ನಿಯ ಕುತ್ತಿಗೆ ಕಡಿದು ಡ್ಯಾನ್ಸ್ ಮಾಡಿದ ಪಾನಮತ್ತ ಪತಿ! ಚಿಂತಾಜನಕ ಸ್ಥಿತಿಯಲ್ಲಿ ಅನಿತಾ
ಕರ್ನಾಟಕ

ಕತ್ತಿಯಿಂದ ಪತ್ನಿಯ ಕುತ್ತಿಗೆ ಕಡಿದು ಡ್ಯಾನ್ಸ್ ಮಾಡಿದ ಪಾನಮತ್ತ ಪತಿ! ಚಿಂತಾಜನಕ ಸ್ಥಿತಿಯಲ್ಲಿ ಅನಿತಾ

Share
1 Min Read
SHARE

newsics.com

ಉಡುಪಿ: ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ಕುತ್ತಿಗೆ ಕಡಿದ ಪತಿ‌ ಮಹಾಶಯ ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.

ಪತ್ನಿ ಅನಿತಾ (38) ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪತಿ ಲಕ್ಷ್ಮಣ ಬಳಿಕ ಡ್ಯಾನ್ಸ್ ಅಟ್ಟಹಾಸ ಮೆರೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅನಿತಾಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ರೂರಿನ ಕಾಶಿ ಮಠ, ರೆಸಿಡೆನ್ಶಿಯಲ್ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಮೂಲದ ದಂಪತಿ, ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿದ್ದರು. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತಿ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆ ಕಡಿದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಮನೆಯಲ್ಲೇ ಬಿಟ್ಟು ಮನೆಯ ಬಾಗಿಲ ಚಿಲಕ ಹಾಕಿ ಹಾಲ್‌ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ನರ್ತನೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ.

ಪತ್ನಿಯ ಚೀರಾಟದಿಂದ ಸ್ಥಳೀಯರಿಗೆ ವಿಚಾರ ತಿಳಿದಿದ್ದು ಕೂಡಲೇ ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಮಹಿಳೆಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟಾದರೂ ಮೈಮೇಲೆ ದೈವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿ ಯಾವುದಕ್ಕೂ ಕ್ಯಾರೇ ಎಂದಿಲ್ಲ.

ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದು ಒಂದೂವರೆ ಗಂಟೆಯ ಬಳಿಕ ಆರೋಪಿ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ರೆಸ್ಟ್ ಹೌಸ್‌ನಲ್ಲಿ ಸಹೋದ್ಯೋಗಿ ಅಧಿಕಾರಿ ಜತೆ ಇದ್ದಾಗಲೇ ಪತ್ನಿ ಕೈಗೆ ಸಿಕ್ಕಿಬಿದ್ದ ಪೊಲೀಸ್ ಇನ್ಸ್ಪೆಕ್ಟರ್‌, ವೈರಲ್ ವಿಡಿಯೋ ನೋಡಿ

ಪ್ರವಾಹ, ಭೂಕುಸಿತದಿಂದ ಪಾರಾಗಿ ಕಾಡಿಗೋಡಿದಾಗ ಎದುರಾಯ್ತು ಕಾಡಾನೆ ಹಿಂಡು, ಕೈಮುಗಿದು ಬೇಡಿಕೊಂಡೆ, ಆನೆಗಳಿಂದ್ಲೇ ಸಿಕ್ತು ರಕ್ಷಣೆ!

ಹೊಟ್ಟೆಪಾಡಿಗೆ ಮದುವೆಯಾಗುವುದನ್ನೆ ಕಾಯಕ ಮಾಡಿಕೊಂಡ ಯುವತಿ!

TAGGED:A drunken husband who danced after cutting his wife's neck with a sword! Anita is in a worried state
Share This Article
Facebook Twitter Copy Link Print
Previous Article ಸೋಮಾಲಿಯಾದಲ್ಲಿ  ಬಾಂಬ್ ದಾಳಿ, 32 ಮಂದಿ ಸಾವು
Next Article ವಿಭಿನ್ನ ಬಣ್ಣದ ಕಣ್ಣಿನ ಅಪರೂಪದ ಚಿರತೆ ಪತ್ತೆ: ದೇಶದಲ್ಲಿ ಇದೇ ಮೊದಲು!

Popular Posts

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read

You Might Also Like

ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read
ಕರ್ನಾಟಕಪ್ರಮುಖ

Gruhalakshmi alert ಗೃಹಲಕ್ಷ್ಮಿ ಹಣ ಬೇಕಂದ್ರೆ ತಕ್ಷಣ ಈ ಕೆಲಸ ಮಾಡಲೇಬೇಕು

1 Min Read
Crimeಕರ್ನಾಟಕ

Davangere Horrible Incident | ಮೂರು ತಿಂಗಳ ಬಳಿಕ ತಾಯಿಯ ಶವವನ್ನು ಸಮಾಧಿಯಿಂದ ಹೊರತೆಗೆದ ಪುತ್ರರು: ದಾವಣಗೆರೆಯಲ್ಲಿ ಬೆಚ್ಚಿಬೀಳಿಸಿದ ಘಟನೆ

2 Min Read
ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?