Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಲಿವುಡ್: ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ ತಮ್ಮ ತಾಯಿ ಮೀರಾ ರೌಟೇಲಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಸಿದ್ದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಊರ್ವಶಿ ರೌಟೇಲಾ ತಮ್ಮ ತಾಯಿಯ ಹುಟ್ಟುಹಬ್ಬವನ್ನು ವಿಶ್ವದ ಅತಿ ಎತ್ತರದ ಹೋಟೆಲ್ಆದ ಸಿಲ್ ದುಬೈ ಮರಿನಾದಲ್ಲಿ ಸ್ವರ್ಣಲೇಪಿತ ಕೇಕ್ನ್ನು ಕತ್ತರಿಸುವ ಮೂಲಕ ಆಚರಿಸಿದರು.
ವೈರಲ್ ಆದ ವಿಡಿಯೋನಲ್ಲಿ ಊರ್ವಶಿ ತನ್ನ ತಾಯಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಲು ಸಿದ್ಧರಾಗುತ್ತಿರುವಾಗ ಅವರು ತುಂಬಾ ಸಂತೋಷದಿಂದ ಕಾಣುತ್ತಿದ್ದು, ತಾಯಿ-ಮಗಳ ನಡುವಿನ ಸಂತೋಷದಾಯಕ ಮತ್ತು ಆತ್ಮೀಯ ಕ್ಷಣವನ್ನು ಸೆರೆಹಿಡಿಯಲಾಗಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋನಲ್ಲಿ, ಮೀರಾ ರೌಟೇಲಾ ಮತ್ತು ಊರ್ವಶಿ ಉತ್ಸಾಹದಿಂದ ತನ್ನ ಸುತ್ತಲೂ ನೃತ್ಯ ಮಾಡುತ್ತಿದ್ದು, ಹುಟ್ಟುಹಬ್ಬದ ಆಚರಣೆಗಾಗಿ ಮೂರು ಅಂತಸ್ತಿನ ಅದ್ದೂರಿ ಚಿನ್ನದ ಕೇಕ್ನ್ನು ಆರಿಸಿಕೊಂಡಿದ್ದು ಊರ್ವಶಿ ತನ್ನ ತಾಯಿಯ ತಲೆಯ ಮೇಲೆ 24 ಕ್ಯಾರೆಟ್ ಚಿನ್ನದ ಕಿರೀಟವನ್ನು ಇಡುವುದನ್ನು ನೋಡಬಹುದು.
Lifestyle ನಾನ್-ಸ್ಟಿಕ್ vs ಸ್ಟೇನ್‌ಲೆಸ್ ಸ್ಟೀಲ್: ಅಡುಗೆಗೆ ಯಾವ ಪಾತ್ರೆ ಉತ್ತಮ?