Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಂಬೈ: ವಿಜಯ್ ದೇವರಕೊಂಡ ಜೊತೆ ಮದುವೆ ಸುದ್ದಿಗಳ ನಡುವೆಯೂ, ನಟಿ ರಶ್ಮಿಕಾ ಮಂದಣ್ಣ ತಮ್ಮ ಸ್ನೇಹಿತೆಯರೊಂದಿಗೆ ರೋಮ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಅವರು ತಮ್ಮ ಸಹೋದರ ಆನಂದ್ ದೇವರಕೊಂಡರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.ಜೊತೆಗೆ ತಮ್ಮ ಪ್ರವಾಸದ ಬಗೆಗಿನ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಪ್ರವಾಸದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡಾ ಕಾಣಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಪೋಸ್ಟ್‌ಗೆ ರೋಮ್ ಇಲ್ಲಿಯವರೆಗೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಈ ಬಾರಿಯ ಹೊಸ ವರ್ಷವನ್ನು ಅಲ್ಲೇ ಆಚರಿಸಿಕೊಂಡಿದ್ದಾರೆ.
ಒಂದು ಫೋಟೋದಲ್ಲಿ ವಿಜಯ್ ಐಕಾನಿಕ್ ಕೊಲೋಸಿಯಮ್ ಮುಂದೆ ಪೋಸ್ ನೀಡಿದ್ದರೆ, ಇನ್ನೊಂದು ಫೋಟೋದಲ್ಲಿ ನಟನ ಭುಜದ ಮೇಲೆ ಮಹಿಳೆಯೊಬ್ಬರು ತಲೆ ಒರಗಿಸಿಕೊಂಡಿದ್ದಾರೆ. ಆ ಮಹಿಳೆಯ ಮುಖ ಕಾಣಿಸದಿದ್ದರೂ, ಅಭಿಮಾನಿಗಳು ಅದು ರಶ್ಮಿಕಾ ಎಂದು ಕರೆದಿದ್ದಾರೆ.
ಹೊಸ ವರ್ಷದ ಶುಭಾಶಯಗಳು, ನಾವು ಒಟ್ಟಿಗೆ ಬೆಳೆಯೋಣ, ಉತ್ತಮ ನೆನಪುಗಳನ್ನು ಸೃಷ್ಟಿಸೋಣ, ಉತ್ತಮ ಕೆಲಸಗಳನ್ನು ಮಾಡೋಣ, ಪ್ರೀತಿ, ಉಲ್ಲಾಸ ಮತ್ತು ಜೀವನವನ್ನು ಹರಡೋಣ. ಎಂದು ವಿಜಯ್ ತಮ್ಮ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ
https://www.instagram.com/p/DS2xZ_wE8Xx/?igsh=MTZwOGF4cTdmb2Y5dg==
https://www.newsics.com/2026/01/01/prices-of-tobacco-products-to-increase-from-february-1/