Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೊಸ ವರ್ಷದ ದಿನವೇ ಅನಿಲ ಕಂಪನಿಗಳು ಜನ ಸಾಮಾನ್ಯರಿಗೆ ಬಿಗ್ ಶಾಕ್ ಕೊಟ್ಟಿದೆ. 2026ರ ಆರಂಭದಲ್ಲೇ ಸಿಲಿಂಡರ್ ಬೆಲೆಗಳಲ್ಲಿ ಭಾರೀ ಏರಿಕೆ ಆಗಿದೆ. ಸಿಲಿಂಡರ್ ಬೆಲೆ ಭಾರಿ ಏರಿಕೆಯಾಗಿದೆ.
ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ ತೀವ್ರವಾಗಿ ಹೆಚ್ಚಳವಾಗಿದೆ. ಆದರೆ ಗೃಹಬಳಕೆಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
28 ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಅತಿದೊಡ್ಡ ಹೆಚ್ಚಳವಾಗಿದೆ. ಅಂದರೆ, ಕೊನೆಯ ಬಾರಿಗೆ ಅಕ್ಟೋಬರ್ 2023 ರಲ್ಲಿ ಇಷ್ಟು ದೊಡ್ಡ ಏರಿಕೆಯಾಗಿತ್ತು.
19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ದುಬಾರಿಯಾಗಿವೆ. 19 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ.
ಇದರೊಂದಿಗೆ, ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ ರೂ. 1,691.50, ರೂ. 1,795 ಮತ್ತು ರೂ. 1,642.50 ಕ್ಕೆ ತಲುಪಿದೆ. ಚೆನ್ನೈನಲ್ಲಿ, ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ರೂ. 110 ರಷ್ಟು ಹೆಚ್ಚಾಗಿ 1,849.50 ಕ್ಕೆ ತಲುಪಿದೆ.
https://www.newsics.com/2026/01/01/how-many-days-are-bank-holidays-in-january-2026/