Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜನವರಿ 2026ರಲ್ಲಿ ಬ್ಯಾಂಕ್‌ಗೆ ಹೋಗುವ ಯೋಜನೆ ಇದ್ದರೆ, ರಜಾದಿನಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ಬಹಳ ಅಗತ್ಯ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದ ರಜಾ ಕ್ಯಾಲೆಂಡರ್ ಪ್ರಕಾರ, ಈ ತಿಂಗಳಲ್ಲಿ ಹಬ್ಬಗಳು, ರಾಜ್ಯ ಮಟ್ಟದ ಆಚರಣೆಗಳು ಹಾಗೂ ರಾಷ್ಟ್ರೀಯ ರಜಾದಿನಗಳ ಕಾರಣದಿಂದ ದೇಶದ ಹಲವು ಭಾಗಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತೆ.
ಪ್ರತಿ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರದಂದು ಭಾರತದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿವೆ. ಜನವರಿಯಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಭಾರತದ ಪ್ರಮುಖ ಬ್ಯಾಂಕ್‌ಗಳಿಗೆ ರಜೆ ಇರಲಿವೆ. ಜನವರಿ 2026 ರಲ್ಲಿ 16 ಬ್ಯಾಂಕ್ ರಜಾದಿನಗಳು ಇವೆ.
ವಾರಾಂತ್ಯ ಬ್ಯಾಂಕ್ ರಜಾ ದಿನಗಳ ವಿವರ
ಜನವರಿ 4: ಭಾನುವಾರದಂದು ಬ್ಯಾಂಕ್ ರಜಾದಿನ.
ಜನವರಿ 10: ಎರಡನೇ ಶನಿವಾರ ಬ್ಯಾಂಕ್ ರಜಾದಿನ.
ಜನವರಿ 11: ಭಾನುವಾರ ಬ್ಯಾಂಕ್ ರಜಾದಿನ.
ಜನವರಿ 18: ಭಾನುವಾರ ಬ್ಯಾಂಕ್‌ಗಳಿಗೆ ರಜೆ.
ಜನವರಿ 24: ಎರಡನೇ ಶನಿವಾರ ಬ್ಯಾಂಕ್ ರಜೆ.
ಜನವರಿ 25: ಭಾನುವಾರ ಬ್ಯಾಂಕ್ ರಜೆ.
ಜನವರಿ ತಿಂಗಳಿನಲ್ಲಿ ವಾರಾಂತ್ಯದ 6 ರಜೆ ದಿನಗಳು ಹಾಗೂ 2 ಸಾರ್ವತ್ರಿಕ ರಜೆ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 8 ದಿನಗಳು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ.
ಜನವರಿ 15: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದ ಬ್ಯಾಂಕ್‌ಗಳಿಗೆ ರಜೆ ಇರಲಿವೆ.
ಜನವರಿ 26: ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
https://www.newsics.com/2026/01/01/first-look-of-prabhas-spirit-movie-released-for-the-new-year/