Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೋಡಾ : ಹೊಸ ವರ್ಷದ ಸಂಭ್ರಮಾಚರಣೆ ನಡುವೆ ಜಪಾನ್‌ನಲ್ಲಿ ನೋಡಾ ನಗರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿದೆ. ಮನೆ, ಕಟ್ಟಡಗಳು ಅಲುಗಾಡಿದೆ. ಮನೆ, ಕಟ್ಟಡಗಳು ಅಲುಗಾಡಿದೆ. ಜನರು ಭಯಗೊಂಡ ಹೊರಗೆ ಬಂದಿದ್ದಾರೆ.
ಜಪಾನ್‌ಲ್ಲಿ ಇಂದು (ಡಿ.31) ರಾತ್ರಿ 11.30ರ ವೇಳೆಗೆ (ಜಪಾನ್ ಸಮಯ) ಭೂಮಿ ಕಂಪಿಸಿದೆ. ಟೋಕಿಯೋ ಸೇರಿದಂತೆ ಜಪಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ಭೂಮಿ ಕಂಪಿಸಿದೆ. ಹೊಸ ವರ್ಷವನ್ನು ಜಪಾನ್ ಜನರು ಬರಮಾಡಿಕೊಳ್ಳಲು ಕೇವಲ 24 ನಿಮಿಷಗಳು ಮಾತ್ರ ಬಾಕಿ ಇತ್ತು. ಈ ವೇಳೆ ಭೂಮಿ ಕಂಪಿಸಿ ಆತಂಕದ ವಾತಾವರಣ ನಿರ್ಮಾಾಣವಾಗಿದೆ.
ನೋಡಾ ನಗರದಿಂದ ಪೂರ್ವ ದಿಕ್ಕಿನಲ್ಲಿ 91 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು. 13.1 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ನೋಡಾ ನಗರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು ನೋವಿನ ಮಾಹಿತಿಯಿಲ್ಲ.