Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ರವಾಹ, ಭೂಕುಸಿತದಿಂದ ಪಾರಾಗಿ ಕಾಡಿಗೋಡಿದಾಗ ಎದುರಾಯ್ತು ಕಾಡಾನೆ ಹಿಂಡು, ಕೈಮುಗಿದು ಬೇಡಿಕೊಂಡೆ, ಆನೆಗಳಿಂದ್ಲೇ ಸಿಕ್ತು ರಕ್ಷಣೆ!
ದೇಶಪ್ರಮುಖವೈರಲ್

ಪ್ರವಾಹ, ಭೂಕುಸಿತದಿಂದ ಪಾರಾಗಿ ಕಾಡಿಗೋಡಿದಾಗ ಎದುರಾಯ್ತು ಕಾಡಾನೆ ಹಿಂಡು, ಕೈಮುಗಿದು ಬೇಡಿಕೊಂಡೆ, ಆನೆಗಳಿಂದ್ಲೇ ಸಿಕ್ತು ರಕ್ಷಣೆ!

Share
2 Min Read
SHARE

newsics.com

ವಯನಾಡು(ಕೇರಳ): ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ವೇಳೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಕಾಡಿಗೆ ಹೋದ ಅಜ್ಜಿ ಮತ್ತು ಮೊಮ್ಮಗಳನ್ನು ಕಾಡಾನೆಗಳು ರಕ್ಷಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.

ದೇವರನಾಡು ಕೇರಳದ ಹಚ್ಚ ಹಸಿರಿನಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ವಯನಾಡು ಕಳೆದ ವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ.

ಜುಲೈ 30ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದು, ಅವಶೇಷಗಳಡಿಯಲ್ಲಿ ಇನ್ನೂ ನೂರಾರು ಮಂದಿ ಸಿಲುಕಿದ್ದಾರೆ.

ಇದೇ ವಯನಾಡಿನಲ್ಲಿ ಪ್ರವಾಹದಿಂದ ಕಾಡಿಗೆ ಓಡಿ ಬಂದಿದ್ದ ಅಜ್ಜಿ ಮತ್ತು ಮೊಮ್ಮಗಳನ್ನು ಅಲ್ಲಿನ ಕುಖ್ಯಾತ ಕಾಡಾನೆ ‘ಕೊಂಬನ್’ ಮತ್ತು ತಂಡ ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.

ಕೇರಳದ ಸ್ಥಳೀಯ ಮಾಧ್ಯಮದಲ್ಲಿ ವರದಿಯಾದ ಅಜ್ಜಿ, ಮೊಮ್ಮಗಳ ಈ ಕಥೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌
ಮುಂಡಕೈನ ನಿವಾಸಿ ಟೀ ಎಸ್ಟೇಟ್‌ನ ಕೆಲಸಗಾರ್ತಿಯಾದ ಸುಜಾತ ಎಂಬ ವೃದ್ಧೆ ತನ್ನ ಮೊಮ್ಮಗಳೊಂದಿಗೆ ಜುಲೈ 30ರಂದು ಮನೆಯಲ್ಲಿದ್ದಾಗ ರಾತ್ರಿ ಭಾರಿ ಮಳೆ ನಡುವೆ ದೊಡ್ಡ ಶಬ್ದ ಕೇಳಿಬಂದಿದೆ. ಈ ವೇಳೆ ಎಚ್ಚೆತ್ತ ಅಜ್ಜಿ ಮನೆಯಿಂದ ಹೊರಗೆ ನೋಡಿದಾಗ ಪ್ರವಾಹದ ನೀರು ಇಡೀ ಊರನ್ನು ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿದ್ದಾರೆ. ಕೂಡಲೇ ಅಜ್ಜಿ ಉಟ್ಟ ಬಟ್ಟೆಯೊಡನೆ ತಮ್ಮ ಮೊಮ್ಮಗಳೊಂದಿಗೆ ಎತ್ತರದ ಕಾಡಿನ ಪ್ರದೇಶಕ್ಕೆ ಓಡಿದ್ದಾರೆ.

ಕಾಡಿನಲ್ಲಿ ಅವರಿಗೆ ಕೇರಳದ ಕುಖ್ಯಾತ ”ಕೊಂಬನ್” ಆನೆ ಮತ್ತು ತಂಡ ಎದುರಾಗಿದೆ. ಆನೆಯನ್ನು ಕಂಡ ಕೂಡಲೇ ಕಣ್ಣೀರು ಹಾಕಿದ ವೃದ್ಧೆ ಸುಜಾತ ತನ್ನ ಮನೆ-ಆಸ್ತಿ ಸರ್ವಸ್ವವನ್ನೂ ಕಳೆದುಕೊಂಡಿದ್ದೇನೆ. ನಮ್ಮನ್ನು ಏನೂ ಮಾಡಬೇಡ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

ಅಚ್ಚರಿ ಎಂದರೆ ಕಾಡಾನೆ ಕೊಂಬನ್ ಮತ್ತು ತಂಡ ಈ ವೇಳೆ ಅಜ್ಜಿ ಮತ್ತು ಮೊಮ್ಮಗಳಿಗೆ ಏನೂ ಮಾಡಿಲ್ಲ. ಅಲ್ಲದೆ ಬೆಳಗಿನ ಜಾವದವರೆಗೂ ಅವರಿರುವ ಸ್ಥಳದಲ್ಲೇ ಇದ್ದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಹೊರಟು ಹೋಗಿವೆ. ಬಳಿಕ ರಕ್ಷಣಾ ತಂಡ ಬಂದು ಸುಜಾತ ಮತ್ತು ಅವರ ಮೊಮ್ಮಗಳನ್ನು ರಕ್ಷಣೆ ಮಾಡಿವೆ.

ಮೂರು ಆನೆ ಆ ಬೆಟ್ಟದಲ್ಲಿತ್ತು. ನಮ್ಮ ಬಳಿ ನಿಂತಿದ್ದು ಗಂಡಾನೆ. ಅಲ್ಲಿದ್ದದ್ದು ನಾನು ಮತ್ತು ಮೊಮ್ಮಗಳು ಮಾತ್ರ. ಮಗಳು ಗಾಯವಾಗಿ ಕಾಫಿ ತೋಟದಲ್ಲಿ ಮಲಗಿದ್ದಳು. ಅಳಿಯ ಬಾಕಿ ಉಳಿದವರನ್ನು ಕಾಪಾಡಲು ಓಡುತ್ತಿದ್ದ. ಪ್ರಾಣಾಪಾಯವೇನೂ ಸಂಭವಿಸಿಲ್ಲ. ನನ್ನ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನಗಾದ ಅನುಭವ ಹಂಚಿಕೊಂಡಿದ್ದಾರೆ.

ಹೊಟ್ಟೆಪಾಡಿಗೆ ಮದುವೆಯಾಗುವುದನ್ನೆ ಕಾಯಕ ಮಾಡಿಕೊಂಡ ಯುವತಿ!

ಲಿಪ್ ಕಿಸ್ ಮಾಡುತ್ತಾ ಜಾಲಿ ರೈಡ್ ಹೊರಟ ಜೋಡಿ; ವಿಡಿಯೋ ವೈರಲ್

ಯಾದಗಿರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಠಾತ್ ಸಾವು: ಶಾಸಕರೇ ಕಾರಣ ಎಂದ ಸಾರ್ವಜನಿಕರು, ಆಂಬುಲೆನ್ಸ್ ತಡೆದು ಆಕ್ರೋಶ

TAGGED:we got protection from the elephants!When we begged with folded hands
Share This Article
Facebook Twitter Copy Link Print
Previous Article ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯ ರಾಜೀನಾಮೆ: BSY ಭವಿಷ್ಯ
Next Article ಒಳಗಡೆ ಷರ್ಟ್ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ; ವಿಡಿಯೋ ವೈರಲ್

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?