newsics.com
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು ರೊಮ್ಯಾನ್ಸ್ ನಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇದೀಗಾ ಅಂತದ್ದೇ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಟ್ರಾಫಿಕ್ ನಿಯಮ ಉಲ್ಲಂಘನೆ ಜೊತೆಗೆ ಅಸಭ್ಯ ನಡೆಯ ಎಲ್ಲಾ ಪ್ರಕರಣ ದಾಖಲಿಸಿ ಈ ಜೋಡಿಗೆ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಯುವಕನೊರ್ವ ಬೈಕ್ ಓಡಿಸುತ್ತಿದ್ದು, ಆತನ ಹಿಂಭಾಗದಲ್ಲಿ ಜೋಡಿಯೊಂದು ಕುಳಿತಿರುವುದನ್ನು ಕಾಣಬಹುದು. ಹಿಂದೆ ಇದ್ದ ಜೋಡಿ ಪರಸ್ಪರ ತುಟಿಗೆ ಮುತ್ತಿಡುತ್ತಾ ರೈಡ್ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.