newsics.com
ಸೋಷಿಯಲ್ ಮೀಡಿಯಾಗಳಲ್ಲಿಯೂ ವೈಷ್ಣವಿ ಸಖತ್ ಆ್ಯಕ್ಟೀವ್. ಯೂಟ್ಯೂಟ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್ಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್ ಆಗಿ ರೀಲ್ಸ್ ಮಾಡುತ್ತಾರೆ.
ಇದೀಗ ವೈಷ್ಣವಿ ಅವರು ನಚಲೇ ನಚಲೇ ಹಾಡಿಗೆ ಸ್ಟೆಪ್ ಹಾಕಿದ್ದು, ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಉಫ್ ಬಿದ್ದೋಗಿ ಬಿಟ್ಟೆ ಕಣ್ರೀ ಎನ್ನುತ್ತಿದ್ದಾರೆ. ಅಲ್ಲದೇ, ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಸದ್ಯ ರೀಲ್ಸ್ ನಲ್ಲಿ ವೈಷ್ಣವಿ ಅವರು ಸ್ಕಿನ್ ಕಲರ್ ಷರ್ಟ್ ಹಾಕಿರುವ ಕಾರಣ, ಅದನ್ನೇ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.
ಒಳಗಡೆ ಷರ್ಟ್ ಇದ್ಯಾ| ಗೊತ್ತೇ ಆಗ್ಲಿಲ್ಲ, ನಮಗೆ ಕಂಡಿದ್ದೇ ಬೇರೆ ಎಂದೆಲ್ಲಾ ತಮಾಷೆ ಮಾಡುತ್ತಿದ್ದಾರೆ. ಇನ್ನು ಹಲವರು ಹಾರ್ಟ್ ಇಮೋಜಿಗಳನ್ನು ಹಾಕುತ್ತಿದ್ದಾರೆ. ಮತ್ತೆ ಕೆಲವರು ನೀವು ಸೀರೆಯಲ್ಲಿ ಚೆನ್ನಾಗಿ ಕಾಣ್ತೀರಾ, ಈ ರೀತಿ ಪ್ರದರ್ಶನದ ಡ್ರೆಸ್ ಬೇಡ ಪ್ಲಿಸ್ ಎನ್ನುತ್ತಿದ್ದಾರೆ.