newsics.com
ಶ್ರಾವಣ ಮಾಸದ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್‌ನಲ್ಲಿ ಗಂಗಾಜಲವನ್ನು ಅರ್ಪಿಸಿದ ಆರೋಪದ ಮೇಲೆ ಸಂಘಟನೆಯ ಇಬ್ಬರನ್ನು ಬಂಧಿಸಲಾಗಿದೆ.
ತಾಜ್ ಮಹಲ್ ಅನ್ನು ‘ತೇಜೋಮಹಾಲಯ’, ಶಿವ ಮಂದಿರ ಎಂದು ಪರಿಗಣಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪವಿತ್ರ ನೀರನ್ನು ಅರ್ಪಿಸಿದ್ದೇವೆ ಎಂದು ಬಂಧಿತರು ಹೇಳಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಳ್ಳುವ ಇಬ್ಬರನ್ನು ತಾಜ್ ಮಹಲ್ ಆವರಣದಿಂದ ಬಂಧಿಸಿರುವುದನ್ನು ತಾಜ್‌ಗಂಜ್ ಪೊಲೀಸರು ಖಚಿತಪಡಿಸಿದ್ದಾರೆ.
ಶಹಜಹಾನ್ ಮತ್ತು ಮುಮ್ತಾಜ್ ಮೂಲ ಸಮಾಧಿಗಳನ್ನು ಹೊಂದಿರುವ ತಾಜ್ ಮಹಲ್‌ನ ನೆಲಮಾಳಿಗೆಗೆ ಹೋಗುವ ಮುಚ್ಚಿದ ಮೆಟ್ಟಿಲುಗಳ ಮೇಲೆ ಆರೋಪಿಗಳಲ್ಲಿ ಒಬ್ಬರು ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸುರಿಯುವುದನ್ನು ವಿಡಿಯೊದಲ್ಲಿ ನೋಡಬಹುದು.