Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೆಚ್ಚಿನ ಜನರಿಗೆ ಟೀ ಅಂದ್ರೆ ಹಾಟ್ ಫೇವರಿಟ್. ಅದಕ್ಕೆ ಅನೇಕರು ಎದ್ದ ತಕ್ಷಣ ಒಂದು ಕಪ್ ಟೀಯೊಂದಿಗೆ ತಮ್ಮ ದಿನ ಪ್ರಾರಂಭಿಸುತ್ತಾರೆ. ಕೆಲವರಿಗೆ, ಟೀ ಸಿಗದಿದ್ದರೆ ಆ ದಿನವೇ ವೇಸ್ಟ್ ಎಂಬಂತೆ ಭಾವಿಸುತ್ತಾರೆ. ಆದ್ರೆ, ಅನೇಕ ಜನರು ಪ್ಲಾಸ್ಟಿಕ್ ಸ್ಟ್ರೈನರ್ ಬಳಸಿ ಟೀ ಸೋಸುತ್ತಾರೆ. ಆದರೆ ಪ್ಲಾಸ್ಟಿಕ್ ಸ್ಟ್ರೈನರ್ ಬಳಸುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ಬಿಸಿ ಟೀ ಪ್ಲಾಸ್ಟಿಕ್‌ನಿಂದ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅದು ದೇಹವನ್ನು ಪ್ರವೇಶಿಸಿ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಯಾವಾಗಲೂ ಸ್ಟೀಲ್ ಸ್ಟ್ರೈನರ್ ಬಳಸಿ. ಇವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.
ಅನೇಕ ಜನರು ಅತಿಥಿಗಳಿಗಾಗಿ ಅಥವಾ ತಮಗಾಗಿ ಉಳಿದ ಟೀ ಮತ್ತೆ ಬಿಸಿ ಮಾಡುವುದು ಸಾಮಾನ್ಯ. ಹಾಗೆ ಮಾಡುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಟೀ ರುಚಿಯನ್ನು ಹಾಳು ಮಾಡುವುದಲ್ಲದೆ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಸಹ ನಾಶಪಡಿಸುತ್ತದೆ. ಇದು ಅಸಿಡಿಟಿಯಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
ಟೀ ತಯಾರಿಸುವಾಗ ಮೊದಲು ಹಾಲು ಸೇರಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅಷ್ಟೇ ಅಲ್ಲ, ಇದು ಟೀ ನಿಜವಾದ ರುಚಿ ಮತ್ತು ಪ್ರಯೋಜನಗಳನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ ಟೀಪುಡಿ, ನೀರು, ಶುಂಠಿ ಇತ್ಯಾದಿಗಳನ್ನು ಒಟ್ಟಿಗೆ ಕುದಿಸಿ ನಂತರ ಹಾಲು ಸೇರಿಸುವುದು ಉತ್ತಮ.
ಕ್ರಿಸ್ಮಸ್ ಆಚರಣೆ ವೇಳೆ ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ: ಕಾಮುಕ ಅರೆಸ್ಟ್