Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಬ್ಬರು ಸಹೋದರಿಯರು ತಮ್ಮ ಸಾಕು ನಾಯಿಯ ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು,ಬಳಿಕ ಇದೇ ನೋವಿನಲ್ಲಿ ಮೂರು ದಿನಗಳಲ್ಲಿ ಸಾಕು ನಾಯಿ ಕೂಡ ಪ್ರಾಣ ಬಿಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದ ಪ್ಯಾರಾ ಪ್ರದೇಶದಲ್ಲಿ ನಡೆದಿದೆ.
ಲಕ್ನೋದ ಪ್ಯಾರಾ ಪ್ರದೇಶದ ಜಲಾಲ್‌ಪುರ ಗ್ರಾಮದ ನಿವಾಸಿಗಳಾದ ರಾಧಾ (27) ಮತ್ತು ಜಿಯಾ (24) ಮೃತ ಸಹೋದರಿಯರು. ಪ್ರೀತಿಯ ಸಾಕು ನಾಯಿ ಟೋನಿ (ಜರ್ಮನ್ ಶೆಫರ್ಡ್) ಅನಾರೋಗ್ಯದಿಂದ ಬಳಲುತ್ತಿತ್ತು. ನಾಯಿಯ ನೋವನ್ನು ನೋಡಿ ಸಹಿಸಲಾಗದ ಇಬ್ಬರು ಸಹೋದರಿಯರು ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಬಳಿಕ ಟೋನಿ ಕೂಡ ಈ ಅಗಲಿಕೆಯನ್ನು ಸಹಿಸಲಾರದೆ ಮೂರು ದಿನಗಳ ನಂತರ ಶನಿವಾರ ಸಾವನ್ನಪ್ಪಿದ್ದೆ.
ಆತ್ಮಹತ್ಯೆಗೂ ಮುನ್ನ ಇಬ್ಬರು ಸಹೋದರಿಯರು ತಮ್ಮ ತಾಯಿ ಗುಲಾಬ್ ದೇವಿಗೆ, ನಾವು ಸತ್ತ ನಂತರ, ಟೋನಿಯನ್ನು ಮನೆಯಿಂದ ಓಡಿಸಬೇಡಿ. ಅವನಿಗೆ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದರು. ತಮ್ಮ ಹೆಣ್ಣುಮಕ್ಕಳ ಕೊನೆಯ ಆಸೆಯನ್ನು ಈಡೇರಿಸಲು ಕುಟುಂಬವು ಟೋನಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಗಂಭೀರ ಹೊಟ್ಟೆಯ ಕಾಯಿಲೆ ಮತ್ತು ತನ್ನ ಇಬ್ಬರು ಅಕ್ಕಂದಿರ ಅಗಲಿಕೆ ನೋವಿನಿಂದ ಟೋನಿ ಕೂಡ ಕೊನೆಯುಸಿರೆಳೆದಿದೆ.
ಕುಟುಂಬವು ರಾಧಾ ಮತ್ತು ಜಿಯಾರ ಅಂತ್ಯಕ್ರಿಯೆಯನ್ನು ನಡೆಸಿದಂತೆಯೇ, ಟೋನಿಗೆ ಸಹ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.
https://www.newsics.com/2025/12/28/saanvi-sudeep-responds-to-body-shaming-in-his-own-style/