ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಈ ಮೊದಲು ‘ಮ್ಯಾಕ್ಸ್’ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್ನಲ್ಲಿ ‘ಮಾರ್ಕ್’ ಸಿನಿಮಾ ಮಾಡಲಾಗಿದೆ. ಡಿಸೆಂಬರ್ 25ರಂದು ಬಿಡುಗಡೆ ಆಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಹಾಗಾದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಕ್’ ಚಿತ್ರ ಮೂಡಿಬಂದಿದೆಯಾ? ಕಿಚ್ಚನ ರೋಲ್ ಏನು? ಸಿನಿಮಾದಲ್ಲಿ ಏನೇನಿದೆ? ಹೇಗನಿಸುತ್ತೆ ಸಿನಿಮಾ? ಇಲ್ಲಿದೆ ರಿವ್ಯೂ.
ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸುತ್ತಿದ್ದಾರೆ. ಬಹುಭಾಷೆಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಸ್ ಅವತಾರದಲ್ಲಿ ಕಿಚ್ಚ ಸುದೀಪ್ ಅವರು ಮನರಂಜನೆ ನೀಡಿದ್ದಾರೆ.ಕಳೆದ ವರ್ಷ ಡಿಸೆಂಬರ್ಗೆ ಮ್ಯಾಕ್ಸ್ ಸಿನಿಮಾ ರಿಲೀಸ್ ಮಾಡಿದರೆ ಈ ಬಾರಿ ಕಿಚ್ಚ ಮಾರ್ಕ್ ಸಿನಿಮಾ ರಿಲೀಸ್ ಮಾಡಿದ್ದಾರೆ. ಸಿನಿಮಾದ ಟೈಟಲ್ನಲ್ಲಿ ಸ್ವಲ್ಪ ಸಿಮಿಲಾರಿಟಿ ಇರೋ ಹಾಗೆನೇ ಸಿನಿಮಾದ ಸ್ಟೈಲ್ನಲ್ಲೂ ಸ್ವಲ್ಪ ಸಿಮಿಲಾರಿಟಿ ಇದೆ.
ಮಲಗಿದ್ದಲ್ಲಿಂದಲೇ ಮಾರ್ಕ್ ಇಂಟ್ರಡ್ಯೂಸ್ ಆಗುತ್ತದೆ. ಆರಂಭದಲ್ಲಿಯೇ ತಲ ಯಾರ್ ಗೊತ್ತ ಅಂತ ಮಸ್ತ್ ಆಗಿ ಕುಣಿಯುವ ಸುದೀಪ್ ಆಡಿಯನ್ಸ್ಗೆ ಎನರ್ಜಿ ತುಂಬುತ್ತಾರೆ. ಅದಾದ ನಂತರ ಕಥೆ ನಿಧಾನವಾಗಿ ತೊಡಗಿಕೊಳ್ಳುತ್ತದೆ. ಡ್ರಗ್ಸ್ ಸೀಸ್ನಿಂದ ಶುರುವಾಗುವ ಕಥೆ, ಮಕ್ಕಳ ಕಿಡ್ನ್ಯಾಪ್, ಸಿಎಂ ಕುರ್ಚಿಗೆ ಗುದ್ದಾಟ, ರಾಜಕೀಯ, ರೌಡಿ ಗ್ಯಾಂಗ್, ಅಲ್ಲೊಂದು ಲವ್ ಸ್ಟೋರಿ, ಒಳಗೊಳಗಿನ ಮೋಸ ಅಂತ ಒಂದಷ್ಟು ಎಲಿಮೆಂಟ್ಸ್ ರಿವೀಲ್ ಆಗುತ್ತಾ ಹೋಗುತ್ತದೆ
. ಒಂದು ಡಾರ್ಕ್ ಥೀಮ್ ಮೂವಿ. ಬಹುತೇಕ ಇದು ಕತ್ತಲಲ್ಲೇ ಶೂಟಿಂಗ್ ಆಗಿರುವ ಸಿನಿಮಾ. ಕಿಚ್ಚನ ಸ್ಟೈಲ್, ಮ್ಯಾನರಿಸಂ, ಡೈಲಾಗ್ಸ್ ಎಲ್ಲವೂ ಫ್ಯಾನ್ಸ್ಗೆ ಲೈಕ್ ಆಗುವಂತೆಯೇ ಇದೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ‘ಮಾರ್ಕ್’ ಸಿನಿಮಾದಲ್ಲಿ ಇದೆ. ಚಿತ್ರದ ಆರಂಭದಲ್ಲೇ ವಿಲನ್ ಡ್ರ್ಯಾಗನ್ ಮಂಜು ಅವರು ಅಬ್ಬರಿಸಿದ್ದಾರೆ.
ದಾದಾ ಯಾರ್ ಗೊತ್ತಾ ಹಾಡು ಸಿನಿಮಾದ ಶುರುವಿನಲ್ಲೇ ಇದೆ. ಈ ಸಾಂಗ್ ಮೂಲಕವೇ ಕಿಚ್ಚ ಸುದೀಪ್ ಅವರು ಮಾಸ್ ಎಂಟ್ರಿ ನೀಡುತ್ತಾರೆ.
ಆ್ಯಕ್ಷನ್ ಇಷ್ಟ ಪಡುವವರಿಗೆ ಮಾರ್ಕ್ ಸಿನಿಮಾದ ಆರಂಭದಲ್ಲೇ ಮನರಂಜನೆ ಇದೆ. ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಡ್ರಗ್ಸ್ ಮಾಫಿಯಾ, ಮಕ್ಕಳ ಅಪಹರಣ, ರಾಜಕೀಯ, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಮಾರ್ಕ್ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಇದೆ.
ಬಿಡುಗಡೆಗೂ ಮುನ್ನ ವೈರಲ್ ಆದ ‘ಮಸ್ತ್ ಮಲೈಕಾ..’ ಹಾಡು ಸಹ ಈ ಸಿನಿಮಾದ ಮೊದಲಾರ್ಧದಲ್ಲೇ ಇದೆ. ನಿಶ್ವಿಕಾ ನಾಯ್ಡು, ಸುದೀಪ್ ಡ್ಯಾನ್ಸ್ ಸೂಪರ್. ನವೀನ್ ಚಂದ್ರ, ವಿಕ್ರಾಂತ್, ಶೈನ್ ಟಾಮ್ ಚಾಕೋ, ಯೋಗಿ ಬಾಬು, ಗುರು ಸೋಮಸುಂದರಂ ಸೇರಿದಂತೆ ಹಲವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಟರ್‌ವಲ್‌ಗಿಂತ ಮುನ್ನ ಬರುವ ಫೈಟಿಂಗ್ ಸೀನ್ ಅಭಿಮಾನಿಗಳಿಗೆ ಇಷ್ಟ ಆಗುತ್ತದೆ. ಮೊದಲಾರ್ಧದಲ್ಲಿ ಒಟ್ಟು ಮೂರು ಆ್ಯಕ್ಷನ್ ದೃಶ್ಯಗಳಿವೆ.
ಯಾವುದೇ ವಿಳಂಬ ಇಲ್ಲದೇ ಪಟಪಟನೇ ಕಥೆ ಸಾಗುತ್ತದೆ. ಮುಂದೇನು ಎಂಬ ಕುತೂಹಲ ಈ ಸಿನಿಮಾದ ಪ್ರತಿ ದೃಶ್ಯದಲ್ಲೂ ಮೂಡುತ್ತದೆ.
ಸೆಕೆಂಡ್ ಹಾಫ್ ಮೇಲೆ ನಿರೀಕ್ಷೆ ಮೂಡುವ ರೀತಿಯಲ್ಲಿ ಇಂಟರ್‌ವಲ್ ಎದುರಾಗುತ್ತದೆ. ಸಾಕಷ್ಟು ಟ್ವಿಸ್ಟ್ ಕೂಡ ಮಾರ್ಕ್ ಸಿನಿಮಾದಲ್ಲಿದೆ.
https://www.newsics.com/2025/12/25/silver-price-hits-new-record-gold-price-rises/