Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿಯೊಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ.
ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದು, ಇದರ ಸಂಪೂರ್ಣ ಹಣಕಾಸು ಸಹಾಯವನ್ನು ಅವರ ಕುಟುಂಬವೇ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.
ತಂಜಾವೂರು ಚಿತ್ರಕಲೆ ಶೈಲಿಯಿಂದ ಪ್ರೇರಣೆ ಪಡೆದ ಈ ರಾಮ ಕಲಾಕೃತಿಯನ್ನು 10 ಅಡಿ ಎತ್ತರ, 6 ಅಡಿ ಅಗಲ ಮತ್ತು 2.5 ಅಡಿ ಆಳ ಹೊಂದಿರುವ ರೋಸ್‌ವುಡ್ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರಾಮನ ದೈವಿಕ ರೂಪದೊಂದಿಗೆ ಹನುಮಾನ್, ಗರುಡ ಹಾಗೂ ದಶಾವತಾರದ ಚಿತ್ರಣಗಳನ್ನು ಒಳಗೊಂಡಿರುವುದು ವಿಶೇಷ. ಕಲಾಕೃತಿಯು ವಿಗ್ರಹದಂತೆ ಕಾಣುವ ತ್ರಿಮಿತೀಯ ವಿನ್ಯಾಸವನ್ನು ಹೊಂದಿದ್ದುದೆ.
ಡಿಸೆಂಬರ್ 11ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ದೃಢೀಕರಣ ಪತ್ರವನ್ನು ಸ್ವೀಕರಿಸಿದ ನಂತರ, ಜಯಶ್ರೀ ಫಣೀಶ್ ಅವರ ಮನೆಗೆ ಕಲಾಕೃತಿಯನ್ನು ವೀಕ್ಷಿಸಲು ನಿರಂತರವಾಗಿ ಭಕ್ತರು ಮತ್ತು ಕಲಾಭಿಮಾನಿಗಳ ದಂಡೇ ಹರಿದು ಬಂದಿದೆ.
ಕಲಾಕೃತಿ ಸ್ವೀಕಾರವಾದ ಸುದ್ದಿ ತಿಳಿದ ಕೂಡಲೇ, ರಾಜಾಜಿನಗರದಲ್ಲಿರುವ ಅವರ ಮನೆ ಭಕ್ತರ ದರ್ಶನ ಕೇಂದ್ರತಾಯಿತು. ಕೆಲವರು ಕೇವಲ ದರ್ಶನಕ್ಕಾಗಿ ಬಂದರೆ, ಇನ್ನು ಕೆಲವರು ಭಜನೆ, ನೃತ್ಯ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
50 ವರ್ಷದ ಜಯಶ್ರೀ ಫಣೀಶ್ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ತಮ್ಮ 10 ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ದೇವಾಲಯವೊಂದರಲ್ಲಿ ವರ್ಣಚಿತ್ರವನ್ನು ಸಮರ್ಪಿಸುವ ಸಂದರ್ಭದಲ್ಲಿ, ಅಯೋಧ್ಯೆಯ ಕೇಂದ್ರ ದೇವತೆಯಾದ ಬಾಲರಾಮನ ಕಲಾಕೃತಿಯನ್ನು ನಿರ್ಮಿಸುವ ಆಸೆಯನ್ನು ಅವರು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. ಈ ಆಲೋಚನೆಯೇ ಮುಂದಾಗಿ, ಬೆಂಗಳೂರಿನ ಉದ್ಯಮಿ ಜಿ.ಕೆ. ಪ್ರಮೋದ್ ಸೇರಿದಂತೆ ಕೆಲವರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾದರು.
ACC Cement Company ವಿಲೀನ ಎಫೆಕ್ಟ್: ಶಾಶ್ವತವಾಗಿ ಮರೆಯಾಗಲಿದೆ ಎಸಿಸಿ ಸಿಮೆಂಟ್ ಕಂಪನಿ