Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಚಳಿಗಾಲದಲ್ಲಿ ರಾತ್ರಿ ಸ್ವೆಟರ್ ಧರಿಸಿ ಮಲಗಿದಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ?
ಆರೋಗ್ಯ

ಚಳಿಗಾಲದಲ್ಲಿ ರಾತ್ರಿ ಸ್ವೆಟರ್ ಧರಿಸಿ ಮಲಗಿದಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಈಗಾಗಲೇ ಚಳಿಗಾಲ ಆರಂಭವಾಗಿದೆ, ಹಾಗಾಗಿ ಸ್ವೆಟರ್ ಕೂಡ ಹೊರ ಬಂದಿದೆ. ಕೆಲವರು ರಾತ್ರಿ ಮಲಗುವಾಗ ಸ್ವೆಟರ್ ಧರಿಸುತ್ತಾರೆ. ಆದರೆ ನಿಮಗೆ ಗೊತ್ತಾ? ರಾತ್ರಿ ಹೊತ್ತು ಚಿಕ್ಕ ಮಕ್ಕಳು ಹಾಗೂ ವೃದ್ಧರು ಸ್ವೆಟರ್ ಹಾಕಿಕೊಂಡು ಮಲಗುತ್ತಾರೆ. ಆದ್ರೆ, ರಾತ್ರಿ ಹೊತ್ತು ದಪ್ಪಗಿನ ಸ್ವೆಟರ್​ ಧರಿಸುವುದು ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ಹೊತ್ತು ಸ್ವೆಟರ್​ ಧರಿಸಿ ಮಲಗುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.

ರಾತ್ರಿ ಹೊತ್ತು ಸ್ವೆಟರ್ ಧರಿಸುವುದರಿಂದ ನಿಮ್ಮ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ. ಸ್ವಾಭಾವಿಕವಾಗಿ ಕಡಿಮೆಯಾಗಬೇಕಾದ ದೇಹದ ತಾಪಮಾನದ ಸ್ವೆಟರ್​​​ಗಳನ್ನ ಧರಿಸುವುದರಿಂದ ಏರಿಕೆಯಾಗುತ್ತದೆ. ನಿಮ್ಮ ದೇಹದ ತಾಪಮಾನ ಏರಿಕೆಯಾಗಿ ಶೆಕೆ ಅನುಭವವಾಗುವುದರಿಂದ ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ.

ನೀವು ರಾತ್ರಿ ಹೊತ್ತು ಸ್ವೆಟರ್ ಧರಿಸಿ ಮಲಗಿದಾಗ, ನಿಮ್ಮ ದೇಹವು ಬಿಸಿಯಾಗುತ್ತದೆ. ಅದನ್ನು ತಂಪಾಗಿಸಲು, ನಿಮ್ಮ ದೇಹವು ಬೆವರನ್ನು ಬಿಡುಗಡೆ ಮಾಡುತ್ತದೆ. ನಿರಂತರವಾಗಿ ಬೆವರುವುದರಿಂದ ನಿಮ್ಮ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ ಮತ್ತು ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತದೆ. ಇದು ರಾತ್ರಿಯಲ್ಲಿ ನಿಮಗೆ ಆಗಾಗ್ಗೆ ಬಾಯಾರಿಕೆಯನ್ನುಂಟು ಮಾಡುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ.

ರಾತ್ರಿ ಹೊತ್ತು ಬೆವರುವುದರಿಂದ ಚರ್ಮದ ಮೇಲೆ ದದ್ದುಗಳು, ತುರಿಕೆ ಉಂಟಾಗಬಹುದು. ದೀರ್ಘಕಾಲದವರೆಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಚರ್ಮವು ಉಸಿರಾಡುವುದನ್ನು ತಡೆಯುತ್ತದೆ. ಇದು ಸೋಂಕು ಹರಿಡುವಿಕೆಯನ್ನ ಹೆಚ್ಚಿಸುತ್ತದೆ.

ನಿದ್ರೆಗೆ ಸೂಕ್ತವಾದ ತಾಪಮಾನವು 18°C ​​ಅಥವಾ 21°C ನಡುವೆ ಇರುತ್ತದೆ. ನೀವು ಮಲಗುವ ಕೋಣೆಯ ಉಷ್ಣತೆ ಅಥವಾ ಬಟ್ಟೆಗಳು ತುಂಬಾ ಬಿಸಿಯಾಗಿದ್ದರೆ, ನೀವು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ನೀವು ರಾತ್ರಿಯಿಡೀ ಕಿರಿಕಿರಿ ಅನುಭವಿಸುತ್ತೀರಿ. ಸರಿಯಾದ ನಿದ್ರೆ ಮಾಡದ ಕಾರಣ ಮರುದಿನ ದಣಿದ ಅನುಭವವನ್ನು ಅನುಭವಿಸುತ್ತೀರಿ. ಕಳಪೆ ನಿದ್ರೆ ಮಾನಸಿಕ ಆಯಾಸ, ಏಕಾಗ್ರತೆಯ ಕೊರತೆ ಮತ್ತು ಇನ್ನಿತರ ಸಮಸ್ಯೆಗಳಿಗೂ ಕಾರಣವಾಗಬಹುದು.

ಬಿಗಿಯಾದ ಸ್ವೆಟರ್ ಅಥವಾ ಹೂಡಿ ಧರಿಸಿ ಮಲಗುವುದರಿಂದ ಗಂಟಲಿನ ಮೇಲೆ ಒತ್ತಡ ಉಂಟಾಗುತ್ತದೆ, ಇದು ವಾಯುಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗೊರಕೆಯನ್ನು ಹೆಚ್ಚಿಸುತ್ತದೆ. ಅನೇಕ ಜನರಿಗೆ ಸ್ಲೀಪ್ ಅಪ್ನಿಯಾ (ನಿದ್ರೆಯಲ್ಲಿ ಉಸಿರಾಟ ನಿಲ್ಲುವುದು) ಕೂಡ ಉಂಟಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

 

ಅತಿಯಾದ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಕುಂಠಿತವಾಗುತ್ತದೆ. ಬೆಳಿಗ್ಗೆ ಎದ್ದೇಳುವಾಗ ಕುತ್ತಿಗೆ, ಬೆನ್ನು ಮತ್ತು ಮೊಣಕಾಲುಗಳಲ್ಲಿ ನೋವು ಅಥವಾ ಬಿಗಿತ ಉಂಟಾಗುತ್ತದೆ. ಇದರಿಂದ ಕ್ರಮೇಣ ಸಂಧಿವಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ರಾತ್ರಿಯಲ್ಲಿ ದೇಹವು ಸರಿಯಾಗಿ ತಣ್ಣಗಾಗದಿದ್ದರೆ, ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾಗುತ್ತದೆ. ನಿದ್ರೆ ಸರಿಯಾಗಿರದ ಕಾರಣ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದು ಆಗಾಗ್ಗೆ ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳು ಸಹ ಹೆಚ್ಚಾಗಿ ಕಂಡುಬರುತ್ತವೆ.

https://www.newsics.com/2025/12/22/bus-accident-in-indonesia-15-dead/

TAGGED:#sleep #sweater #night #winter #helath #effect
Share This Article
Facebook Twitter Copy Link Print
Previous Article ಇಂಡೋನೇಷ್ಯಾದಲ್ಲಿ ಬಸ್ ಅಪಘಾತ : 15 ಮಂದಿ ಸಾವು
Next Article Baba Vanga: 2026ರ ಬಗ್ಗೆ ಬಾಬಾ ವಂಗಾ ಹೇಳಿದ್ದೇನು?

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?