newsics.com
ನೈನಿತಾಲ್(ಉತ್ತರಾಖಂಡ): ಮನೆಯವರ ಜೀವ ಉಳಿಸಲು ಎರಡು ಸಾಕು ನಾಯಿಗಳು ಪ್ರಾಣದ ಹಂಗು ತೊರೆದು ಚಿರತೆ ಜತೆ ಹೋರಾಡಿದ ವಿಡಿಯೊವೊಂದು ಭಾರೀ ವೈರಲ್ ಆಗಿದೆ.
ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಈ ಹೋರಾಟದ ಪರಿಣಾಮ ಮಾಲೀಕ ಸೇರಿದಂತೆ ಇಡೀ ಕುಟುಂಬ ಚಿರತೆ ದಾಳಿಯಿಂದ ಪಾರಾಗಿದೆ.
ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಈ ಹೋರಾಟದ ಪರಿಣಾಮ ಮಾಲೀಕ ಸೇರಿದಂತೆ ಇಡೀ ಕುಟುಂಬ ಚಿರತೆ ದಾಳಿಯಿಂದ ಪಾರಾಗಿದೆ.
ಕಾಡಂಚಿನ ನೈನಿತಾಲ್ ಗ್ರಾಮದ ಜನರು ನಿದ್ದೆಗೆ ಜಾರಿದ್ದ ಸಮಯದಲ್ಲಿ ಆಹಾರ ಹುಡುಕಿಕೊಂಡು ಬಂದ ಚಿರತೆ ಏಕಾಏಕಿ ಮನೆಗೆ ನುಗ್ಗಿದೆ. ಮನೆಯ ಬದಿಯಲ್ಲಿನ ದಾರಿ ಮೂಲಕ ಸಾಗಿ ಬಂದ ಚಿರತೆ ಏಕಾಏಕಿ ದಾಳಿ ಆರಂಭಿಸಿದೆ.
ಅಗ ಎರಡು ಸಾಕು ನಾಯಿಗಳು ಪ್ರತಿ ದಾಳಿ ನಡೆಸಿವೆ. ಭಯದಿಂದ ಓಡಿದ ಚಿರತೆಯನ್ನು ನಾಯಿ ಬೆನ್ನಟ್ಟಿದೆ. ಈ ವೇಳೆ ಮತ್ತೆ ಚಿರತೆ ಮನೆಯೊಳಗೆ ಬಂದು ಮತ್ತೆ ದಾಳಿ ಮಾಡಿದೆ. ನಾಯಿಯನ್ನು ಓಡಿಸಿಕೊಂಡು ಬಂದ ಚಿರತೆ ದಾಳಿ ಮುಂದುವರಿಸಿದೆ. ಆದರೆ ಪ್ರಾಣದ ಹಂಗು ತೊರೆದ ನಾಯಿ ಸತತವಾಗಿ ಚಿರತೆ ಜತೆ ಹೋರಾಡಿದೆ. ಎರಡು ನಾಯಿಗಳ ದಾಳಿಯಿಂದ ಚಿರತೆ ಭಯಗೊಂಡು ಹೊರಗೆ ಓಡಿದೆ.
ಮನೆಯೊಳಗಿದ್ದ ಕುಟುಂಬ ಕಿರುಚಾಡಿದೆ. ಶಬ್ದ ಮಾಡಿ ಚಿರತೆ ಓಡಿಸಲು ಮುಂದಾಗಿದ್ದಾರೆ.
ಹೋರಾಟದಲ್ಲಿ ಒಂದು ನಾಯಿ ಕುತ್ತಿಗೆ ಬಳಿ ತೀವ್ರಗಾಯಗೊಂಡಿದೆ. ಚಿರತೆ ಕುತ್ತಿಗೆ ಕಚ್ಚಿ ಎಳೆದೊಯ್ಯುವ ಪ್ರಯತ್ನ ಮಾಡಿತ್ತು. ಆದರೆ ಪ್ರತಿ ದಾಳಿಯಿಂದ ನಾಯಿ ಪ್ರಾಣ ಉಳಿದಿದೆ. ನಾಯಿಗೆ ಚಿಕಿತ್ಸೆ ನೀಡಲಾಗಿದೆ.
ನಾಯಿ ದಾಳಿಯಿಂದ ಓಡಿ ಹೋದ ಚಿರತೆ ಸಾಲ್ತೆವಾಡಿ ಗ್ರಾಮಕ್ಕೆ ನುಗ್ಗಿ ನಾಯಿಯೊಂದನ್ನು ಎಳೆದೊಯ್ದಿದೆ.
कुत्तों के सामने जंगल का राजा जान बचाकर भागा।
देखिए…#Video #Viralvideo #Nainital #Uttrakhand pic.twitter.com/AONrSZkmLP— निशान्त शर्मा (भारद्वाज) (@Nishantjournali) July 31, 2024
ಚೀನಾದ ಜಿಯಾವೊ ವಿರುದ್ಧ ಸೋಲು: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಬಿದ್ದ ಪಿ.ವಿ. ಸಿಂಧು