Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿಗಾಲದಲ್ಲಿ ನೀವು ಹೆಚ್ಚಿನ ಸಮಯವನ್ನು ಚರ್ಮದ ಆರೈಕೆಯಲ್ಲಿ ಕಳೆಯಬೇಕಾಗುತ್ತದೆ..ಮಹಿಳೆಯರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಚರ್ಮ ಎಲ್ಲಾ ಕಾಲದಲ್ಲೂ ಆರೋಗ್ಯವಾಗಿರಲು ನೀವು ಸರಿಯಾದ ಚರ್ಮದ ಆರೈಕೆಯ ನಿಯಮವನ್ನು ಪಾಲಿಸಬೇಕು. ಅದರ ಜೊತೆ ಜೊತೆಗೆ ಪೌಷ್ಠಿಕಾಂಶವನ್ನು ಚರ್ಮಕ್ಕೆ ಬಹಳ ಮುಖ್ಯವಾಗಿರುತ್ತದೆ. ಮಾತ್ರವಲ್ಲದೆ ಹೆಚ್ಚಾಗಿ ನೀರು ಕುಡಿಯೋದು ಕೂಡ ತುಂಬಾ ಮುಖ್ಯವಾಗಿರುತ್ತದೆ.. ನೀವು ಹಗಲಿನಲ್ಲಿ ಸಾಕಷ್ಟು ನೀರು ಕುಡಿದಾಗ ಚರ್ಮವು ಹೈಡ್ರೇಟ್ ಆಗಿ ಉಳಿಯಲು ಅನುವು ಮಾಡಿಕೊಡುತ್ತದೆ ಮತ್ತು ಚರ್ಮದ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಬಿಸಿ ಗಾಳಿ ಎರಡೂ ನಿಮ್ಮ ಚರ್ಮದಿಂದ ತೇವಾಂಶವನ್ನು ಎಳೆಯುತ್ತವೆ, ಅದು ಚಕ್ಕೆಗಳಂತೆ, ತುರಿಕೆಯಾಗಿ, ಕಿರಿಕಿರಿ ಉಂಟುಮಾಡುವ ಬಿಳಿ ಒಣ ತೇಪೆಗಳನ್ನುಂಟುಮಾಡುತ್ತದೆ. ಇನ್ನು, ಹೆಚ್ಚು ಕಾಲ ಬಿಸಿನೀರಿನಲ್ಲಿ ಶವರ್ ಮಾಡ್ತಾ ನಿಲ್ಲಬೇಡಿ.. 10 ರಿಂದ 20 ನಿಮಿಷ ಸಾಕು ಅದಕ್ಕಿಂತ ಹೆಚ್ಚು ಕಾಲ ಸ್ನಾನ ಮಾಡಬೇಡಿ. ಪ್ರತಿಯೊಬ್ಬರು ಸ್ನಾನದ ಬಳಿಕ ಲೋಷನ್‌ಗಳು ಮತ್ತು ಜೆಲ್ ಮಾಯಿಶ್ಚರೈಸರ್‌ಗಳು ಬಳಸಬೇಕು..ಇದ್ರಿಂದ ನಿಮ್ಮ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ..ಜಾಸ್ತಿ ಡ್ರೈ ಆಗುದಿಲ್ಲ..