newsics.com
ಪ್ಯಾರಿಸ್‌ನಲ್ಲಿ ವೆಸ್ಟರ್ನ್ ಡ್ರೆಸ್ ಧರಿಸಿದ್ದರೂ ಕೂಡ ಮುಖೇಶ್ ಅಂಬಾನಿಯ ಕಿರಿಯ ಸೊಸೆ ಮಂಗಳಸೂತ್ರ ತೊಟ್ಟು ಬಂದಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಹಾಗೂ ಅವರ ಕುಟುಂಬ ಒಲಂಪಿಕ್ಸ್ ನ ಪಂದ್ಯ ವೀಕ್ಷಣೆಗೆ ಪ್ಯಾರಿಸ್‌ಗೆ ತೆರಳಿದ್ದಾರೆ. ಈ ವೇಳೆ ನವ ದಂಪತಿಗಳಾದ ಅನಂತ್ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್ ಕೂಡ ಭಾಗಿಯಾಗಿದ್ದು, ಮುಖೇಶ್ ಅಂಬಾನಿಯ ಮುದ್ದಿನ ಸೊಸೆಯನ್ನು ಕಂಡು ನೆಟ್ಟಿಗರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.