Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ದೇಶದಾದ್ಯಂತ ಹವಾಮಾನ ವೈಪರೀತ್ಯ ಮುಂದುವರಿದಿದ್ದು, ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ.
ಡಿಸೆಂಬರ್ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಮುಂಜಾನೆ ಹಿಮಪಾತವಾಗುತ್ತಿರುವುದರಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಈ ಮಧ್ಯೆ, ದೆಹಲಿಗೆ ತೆರಳಿದ್ದ ರಾಜ್ಯದ 20ಕ್ಕೂ ಹೆಚ್ಚು ಶಾಸಕ, ಸಚಿವರು ಇಂಡಿಗೋ ವಿಮಾನದಲ್ಲೇ ಸಿಲುಕಿದ ಘಟನೆ ನಡೆದಿದೆ.
ಬೆಳಗ್ಗೆ 6:45ಕ್ಕೆ ಟೇಕ್ ಆಫ್ ಆಗಬೇಕಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಸಂಚಾರ ಆರಂಭಿಸಲೇ ಇಲ್ಲ.
ಈ ವಿಮಾನದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಎಚ್ಕೆ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅವರಲ್ಲದೇ 20ಕ್ಕೂ ಶಾಸಕರು ಸಿಲುಕಿದ್ದು, ಅಧಿವೇಶನಕ್ಕೆ ಹಾಜರಾಗಲಾರದೆ ಆತಂಕಗೊಂಡಿದ್ದಾರೆ.