Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಪಡೆಯುವ ಮೂಲಕ ಸಿನಿ ಪ್ರಿಯರಲ್ಲಿ ಭಾರಿ ಭರವಸೆ ಮೂಡಿಸಿದ್ದ ಯುವ ನಟ ತನ್ನ ಮನೆಯಲ್ಲೇ ಬದುಕು ಅಂತ್ಯಗೊಳಿಸಿದ್ದಾನೆ. ಘಟನೆಯಿಂದ ಮಲೆಯಾಳಂ ಸಿನಿಮಾ ಇಂಡಸ್ಟ್ರಿ ಆಘಾತಕ್ಕೊಳಗಾಗಿದೆ.
ಚೋಳ ಸಿನಿಮಾದಲ್ಲಿ ಪ್ರಮುಖ ನಾಯಕನಾಗಿ ಕಾಣಿಸಿಕೊಂಡ ಅಖಿಲ್ ವಿಶ್ವನಾಥ್ ಭಾರಿ ಜನಮನ್ನಣೆಗೆ ಪಾತ್ರರಾಗಿದ್ದರು. ಬಾಲನಟನಾಗಿ ಮಲೆಯಾಳಂ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಅಖಿಲ್ ವಿಶ್ವನಾಥ್ ಆಪರೇಶನ್ ಸೇರಿದಂತೆ ಹಲವು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇತ್ತೀಚೆಗೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಅಖಿಲ್ ವಿಶ್ವನಾಥ್, ಮೊಬೈಲ್ ಶಾಪ್‌ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಶಾಪ್‌ಗೂ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದ. ಅಖಿಲ್ ತಾಯಿ ಬೆಳಗ್ಗೆ ಕೆಲಸಕ್ಕೆ ತೆರಳುವ ಸಿದ್ಧತೆಯಲ್ಲಿ ಮಗ ಮಲಗಿದ್ದ ಕೋಣೆ ಬಾಗಿಲು ಮುಚ್ಚಿದ ರೀತಿಯಲ್ಲೇ ಇದೆ ಎಂದು ಅನುಮಾನಗೊಂಡಿದ್ದಾರೆ. ಹೀಗಾಗಿ ಕೋಣೆಯತ್ತ ಹೋಗಿ ನೋಡಿದಾಗ ಅಖಿಲ್ ವಿಶ್ವನಾಥ್ ಮೃತದೇಹ ಪತ್ತೆಯಾಗಿದೆ.