Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಡ್ರಾಪ್ ಕೇಳಿದ್ದಕ್ಕೆ ಭಾರತದ ವ್ಲಾಗರ್ಗೆ ಇಟಲಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದೆ
ಭಾರತೀಯ ಟ್ರಾವೆಲ್ ವ್ಲಾಗರ್ ಪರಮವೀರ್ ಸಿಂಗ್ ಬೇನಿವಾಲ್ ಅವರಿಗೆ ಇಟಲಿಯಲ್ಲಿ ಹಿಚ್ಹೈಕಿಂಗ್ ಮಾಡುವಾಗ ಲೈಂಗಿಕ ಕಿರುಕುಳ ನೀಡಲಾಗಿದೆ. ಖುದ್ದು ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ವೀಡಿಯೊವೊಂದರಲ್ಲಿ, ಟ್ರೆಂಟೊಗೆ ಹೋಗಲು ಡ್ರಾಪ್ ಕೇಳಿದಾಗ ಚಾಲಕನೊಬ್ಬ ಲೈಂಗಿಕ ಸಹಕಾರ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದಾನೆ. ಇದರಿಂದಾಗಿ ಪರಮವೀರ್ ಅವರು ವಿಚಲಿತರಾಗಿ ಅದಕ್ಕೆ ಒಪ್ಪದೆ ಆ ಚಾಲಕನನ್ನು ವಾಪಾಸ್ ಕಳುಹಿಸಿದ್ದಾರೆ.
ಹಿಚ್ಹೈಕಿಂಗ್ ಮಾಡುವಾಗ ತನಗೆ ಲೈಂಗಿಕ ಕಿರುಕುಳವಾಗಿದೆ ಎಂದು ಬಹಿರಂಗಪಡಿಸಿದ ನಂತರ ಭಾರತೀಯ ಪ್ರಯಾಣ ವ್ಲಾಗರ್ ಒಬ್ಬರ ಇತ್ತೀಚಿನ ಅನುಭವವು ಆನ್ಲೈನ್ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ಯಾಸೆಂಜರ್ ಪರಮವೀರ್ ಎಂಬ ಹೆಸರಿನಲ್ಲಿ ಯೂಟ್ಯೂಬ್ನಲ್ಲಿ ತಮ್ಮ ಪ್ರಯಾಣದ ವಿಡಿಯೋಗಳನ್ನು ದಾಖಲಿಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಟ್ರಾವೆಲ್ ಪರಮವೀರ್ ಸಿಂಗ್ ಬೇನಿವಾಲ್, ಈ ಆತಂಕಕಾರಿ ಘಟನೆಯನ್ನು ಹಂಚಿಕೊಂಡಿರುವ ವೀಡಿಯೊವೊಂದು ವೈರಲ್ ಆಗಿದೆ.