ಬೆಂಗಳೂರು: ರಾಜ್ಯದಲ್ಲಿ ಭಾರಿ ಚಳಿ ಶೀತ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಚಳಿಗಾಲದ ಕುರಿತು ಮಾಹಿತಿ ನೀಡಿದೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಶೀತ ಗಾಳಿ ಅಲರ್ಟ್ ನೀಡಲಾಗಿದೆ. ಇಂದಿನಿಂದ ಮೂರು ದಿನ ಭಾರಿ ಚಳಿಯ ಜೊತೆಗೆ ಶೀತ ಗಾಳಿ ಸಾಧ್ಯತೆ ಇದೆ. ಕಲಬುರಗಿ, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಗೆ ಶೀತ ಗಾಳಿ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಕನಿಷ್ಠ ತಾಪಮಾನ 12ರಿಂದ 13 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದಲ್ಲಿ ಕನಿಷ್ಠ ತಾಪಮಾನಕ್ಕೆ ಲಾ ನೀನೋ ಕಂಡೀಶನ್ ಹಾಗೂ ಉತ್ತರ ಭಾರತದಿಂದ ಒಣ ಹವೆ ಶುರುವಾಗಿರುವುದರಿಂದ ಚಳಿ ಹೆಚ್ಚಾಗಿದೆ. ಡಿಸೆಂಬರ್ 17ರ ನಂತರ ಚಳಿ ಕಡಿಮೆಯಾಗಿ ತಾಪಮಾನ ಏರಿಕೆಯಾಗಲಿದೆ.