Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Dalai Lama visit Mundagod Tibetan colony ಮುಂಡಗೋಡ ಟಿಬೆಟಿಯನ್ ಕಾಲೊನಿಯಲ್ಲಿ ದಲೈಲಾಮಾ 45 ದಿನ ವಾಸ್ತವ್ಯ, 130 ವರ್ಷ ಬದುಕುವೆ ಎಂದ ಧರ್ಮಗುರು
ಕರ್ನಾಟಕದೇಶಪ್ರಮುಖವಿದೇಶ

Dalai Lama visit Mundagod Tibetan colony ಮುಂಡಗೋಡ ಟಿಬೆಟಿಯನ್ ಕಾಲೊನಿಯಲ್ಲಿ ದಲೈಲಾಮಾ 45 ದಿನ ವಾಸ್ತವ್ಯ, 130 ವರ್ಷ ಬದುಕುವೆ ಎಂದ ಧರ್ಮಗುರು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮುಂಡಗೋಡ(ಉತ್ತರ ಕನ್ನಡ): ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದಾರೆ.

ಇದರಿಂದಾಗಿ ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕ್ಯಾಂಪ್ ನಂ.6ರ ಗೊಮಾಂಗ್ ಮೊನಾಸ್ಟರಿಯ ಕಾರ್ಯಕ್ರಮದಲ್ಲಿ ಬೌದ್ಧ ಭಿಕ್ಷುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬೌದ್ಧ ಸಂಸ್ಕೃತಿಯು ನಮ್ಮ ಭಾರತ ದೇಶದಿಂದಲೇ ಬೆಳೆಯುತ್ತಾ ಬಂದಿದೆ. ಇಡೀ ವಿಶ್ವದಲ್ಲಿ ಬೌದ್ಧ ಧರ್ಮದ ವಿಚಾರಗಳು ಹೆಚ್ಚು ಗಮನ ಸೆಳೆಯುತ್ತಿವೆ. ಚೀನಾದಲ್ಲಿಯೂ ಬೌದ್ಧ ಧರ್ಮದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು.

ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಬೌದ್ಧ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಉಳಿಸಿಕೊಂಡು ಬಂದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಟಿಬೆಟಿಯನ್ ಹಿರಿಯ ಬೌದ್ಧ ಭಿಕ್ಷುಗಳು ಗುರು ದಲಾಯಿ ಲಾಮಾ ಅವರಿಗೆ ಸನ್ಮಾನ ಮಾಡಿದರು.

130 ವರ್ಷ ಬದುಕುವೆ:

ದಲಾಯಿ ಲಾಮಾ, ತಾವು 130 ವರ್ಷಗಳ ಕಾಲ ಬಾಳಿ ಧರ್ಮ ಹಾಗೂ ಜನರ ಸೇವೆ ಮಾಡುವುದಾಗಿ ತಿಳಿಸಿದರು. ಅವರ ಈ ಹೇಳಿಕೆಯನ್ನು ಕೇಳಿ ಅಲ್ಲಿ ನೆರೆದಿದ್ದ ಬೌದ್ಧ ಸನ್ಯಾಸಿಗಳು ಸಂತೋಷದಿಂದ ತಲೆಬಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ದಲಾಯಿ ಲಾಮಾ ಅವರು ಮುಂಬರುವ 45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಅವರು ಈ ಬಾರಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. 2019ರ ಡಿಸೆಂಬರ್ 12 ರಂದು ಆಗಮಿಸಿದ್ದಾಗ 12 ದಿನಗಳ ಕಾಲ ವಿವಿಧ ಚರ್ಚಾ ಕಾರ್ಯಕ್ರಮಗಳು ಮತ್ತು ಪದವಿ ಪ್ರದಾನದಲ್ಲಿ ಪಾಲ್ಗೊಂಡಿದ್ದರು. ಆದರೆ, ಈ 45 ದಿನಗಳ ವಾಸ್ತವ್ಯ ಕೇವಲ ವಿಶ್ರಾಂತಿಗಾಗಿ ಮಾತ್ರ ಎಂದು ತಿಳಿದುಬಂದಿದೆ.
ಟಿಬೆಟಿಯನ್ ಧರ್ಮಗುರು ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಟಿಬೆಟಿಯನ್ನರು ಸಹ ಲಾಮಾ ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

ಭದ್ರತೆಯ ದೃಷ್ಟಿಯಿಂದ, ಟಿಬೆಟಿಯನ್ ಕ್ಯಾಂಪ್‌ನ ಒಳಗಡೆ ತೆರಳುವ ಎಲ್ಲಾ ವಾಹನಗಳಿಗೆ ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಜತೆಗೆ, ಪಾಸ್ ಹೊಂದಿರುವ ಸಾರ್ವಜನಿಕರಿಗೆ ಮಾತ್ರ ಟಿಬೆಟಿಯನ್ ಕಾಲೋನಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಮತ್ತು ಕ್ಯಾಂಪ್‌ನ ಎರಡು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.

ಸೈಟ್ ಕೊಡಿಸ್ತೇನೆಂದು ಸ್ವಾಮೀಜಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!

ಹನಿಟ್ರ್ಯಾಪ್’ ಗೆ ಸಿಲುಕಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

TAGGED:Dalai Lama stays in Mundagoda Tibetan colony for 45 daysreligious leader says he will live to be 130 years old
Share This Article
Facebook Twitter Copy Link Print
Previous Article ಮೆಸ್ಸಿ ನೋಡಲು ಬಂದ ಅಭಿಮಾನಿಗಳಿಂದ ದಾಂಧಲೆ : ಪೊಲೀಸರಿಂದ ಲಾಠಿಚಾರ್ಜ್
Next Article ಜ. 6 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?