Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!
ಕರ್ನಾಟಕದೇಶಪ್ರಮುಖವಿದೇಶ

Kolhapuri slippers ಹೆಸರಷ್ಟೇ ಕೊಲ್ಹಾಪುರಿ, ಈ ಚಪ್ಪಲಿ ತಯಾರಾಗೋದು ಅಥಣಿಯಲ್ಲೇ, ಇದಕ್ಕೀಗ ಇಟಲಿ ನಂಟು!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಳಗಾವಿ ಜಿಲ್ಲೆ ಅಥಣಿ ಸೇರಿ ಕೆಲ ತಾಲೂಕುಗಳಿಗೆ ಕಾಲಿಟ್ಟರೆ ಸಾಕು ನಿಮಗೆ ಚರ್ಮದ ವಾಸನೆ ಬಡಿಯುತ್ತದೆ. ಚರ್ಮದ ಚಪ್ಪಲಿಗಳ ತಯಾರಿಕೆಗೆ ಈ ಊರು ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ತಯಾರಾಗುವ ಚಪ್ಪಲಿಗಳು, ‘ಕೊಲ್ಹಾಪುರೀಸ್‌’ ಹೆಸರಿನಲ್ಲಿ ಮಾರಾಟವಾಗುತ್ತಿವೆ.

ಇದೀಗ ಲೆದರ್ ಉದ್ಯಮದ ಪ್ರೋತ್ಸಾಹಕ್ಕೆಂದು ಇರುವ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಹಾಗೂ ಮಹಾರಾಷ್ಟ್ರದ ಲಿಡ್ಕಾಮ್ ನಿಗಮ ಸಂಸ್ಥೆಗಳ ಜತೆ ಇಟಲಿಯ ಪ್ರಸಿದ್ಧ ಪ್ರಾಡಾ ಕಂಪನಿ ಅನಿವಾರ್ಯವಾಗಿ ಎಂಒಯು (ಒಡಂಬಡಿಕೆ) ಮಾಡಿಕೊಂಡಿದೆ.

ಮುಂಬೈನಲ್ಲಿರುವ ಇಟಲಿ ರಾಯಭಾರ ಕಚೇರಿಯಲ್ಲಿ ನಡೆದ ಇಟಲಿ-ಭಾರತ ಬ್ಯುಸಿನೆಸ್ ಫೋರಂ ಸಂದರ್ಭದಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಲಿಡ್ಕರ್‌ನ ಉತ್ಪನ್ನವಾದ ಜಿಐ ಟ್ಯಾಗ್ ಹೊಂದಿರುವ ಕೊಲ್ಹಾಪುರಿ ಚಪ್ಪಲಿ ತನ್ನದೆಂದು ಇಟಲಿಯ ಪ್ರಾಡಾ ಕಾಂಪನಿ ಹೇಳಿಕೊಂಡಿದ್ದನ್ನೇ ಆಧಾರವಾಗಿಟ್ಟುಕೊಂಡು ಲಿಡ್ಕರ್ ಎಂಡಿ‌ ಡಾ.ಕೆ.ಎಂ. ವಸುಂಧರಾ ಅವರು ಪ್ರಾಡಾ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ ಪ್ರಾಡಾ ಕಂಪನಿ ಅಧಿಕಾರಿಗಳು ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಭಾಗವಾಗಿ ಲಿಡ್ಕರ್ ಹಾಗೂ ಲಿಡ್ಕಾಮ್‌ನ ಕೊಲ್ಹಾಪುರಿ ಚಪ್ಪಲಿಯ ಲಿಮಿಟೆಡ್ ಎಡಿಷನ್ ತರಲು ಪ್ರಾಡಾ ಮುಂದಾಗಿದೆ. ಈ ಮೂಲಕ ಕೊಲ್ಹಾಪುರಿ ಚಪ್ಪಲಿ ಅಧಿಕೃತವಾಗಿ ಇಟಲಿಯನ್ನು ಪ್ರವೇಶಿಸುವ ಮೂಲಕ ಜಾಗತಿಕ ಮನ್ನಣೆ ಪಡೆದುಕೊಂಡಿದೆ.

ಇದಕ್ಕಾಗಿ ಈಗ ಇಟಲಿಯ ಪ್ರಾಡಾ ಕಂಪನಿ ಭಾರತದ ಚರ್ಮಕಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ.

ಕೊಲ್ಹಾಪುರಿ ಶೈಲಿಯ ಚಪ್ಪಲಿಗಳು ಮಹಾರಾಷ್ಟ್ರದ ಕೊಲ್ಹಾಪುರಿಯಲ್ಲಿ ಮಾರಾಟವಾಗುತ್ತವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಈ ಶೈಲಿಯ ಚಪ್ಪಲಿಗಳನ್ನು ತಯಾರಿಸುವ ಚರ್ಮಕಾರರು ಇದ್ದಾರೆ. ಪ್ರಾಡಾ ಕಂಪನಿಯ ವಿನ್ಯಾಸ ಮತ್ತು ಸಾಮಗ್ರಿಗಳನ್ನು ಬಳಸಿ ಈ ಚರ್ಮಕಾರರು ತಮ್ಮ ಸಾಂಪ್ರದಾಯಿಕ ವಿಧಾನಗಳಿಂದ ಚಪ್ಪಲಿ ತಯಾರಿಸಿಕೊಡುವುದು ಈ ಒಡಂಬಡಿಕೆಯ ಮುಖ್ಯಾಂಶವಾಗಿದೆ.

ಡಿ. 16 ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ: ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿ

Pakistani PM waited 40 minutes to meet Putin ಪುಟಿನ್‌ ಭೇಟಿಗಾಗಿ 40 ನಿಮಿಷ ಕಾದು ತಾಳ್ಮೆಗೆಟ್ಟ ಪಾಕ್ ಪ್ರಧಾನಿ ಮಾಡಿದ್ದೇನು? ವಿಡಿಯೊ ನೋಡಿ

TAGGED:#Kolhapuri #slippers #Athani #Italian #connection!
Share This Article
Facebook Twitter Copy Link Print
Previous Article ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತು 13 ವರ್ಷದ ಬಾಲಕಿ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ-ಇಮೇಲ್
Next Article ಕೋಲ್ಕತ್ತಾಕ್ಕೆ ಬಂದಿಳಿದ ಫುಟ್ಬಾಲ್ ತಾರೆ ಮೆಸ್ಸಿಗೆ ಅದ್ಧೂರಿ ಸ್ವಾಗತ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?