Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ವರದಿಯಾಗಿದೆ. ಹೋಂ ಸ್ಟೇ ಇಂದ ಯುವಕ ಬೆತ್ತಲಾಗಿ ಓಡಿ ಬಂದಿದ್ದು ಆತನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ.
ಮದ್ದೂರು ಮೂಲದ ಮಹೇಶ್ ಎಂಬಾತ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಬೆತ್ತಲಾಗಿ ಓಡಿ ಬರುತ್ತಿರುವುದನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಈ ವೇಳೆ ಯುವಕ ತನ್ನ ಸ್ಥಿತಿಯನ್ನು ಹೇಳಿಕೊಂಡಿದ್ದು, ಆತನಿಗೆ ಟವೆಲ್, ಬಟ್ಟೆಯನ್ನು ಸ್ಥಳೀಯರು ನೀಡಿದ್ದಾರೆ.. ಮಹೇಶ್ ತನ್ನ ಫೇಸ್ ಬುಕ್ ಗೆಳತಿ ಮಡಿಕೇರಿಯ ಮಂಗಳಾನಗರದ ಹೋಂ ಸ್ಟೇಗೆ ಬರುವಂತೆ ಕರೆದಳೆಂದು ಹೋಗಿದ್ದಾನೆ. ರಾತ್ರಿ ಹೋಂ ಸ್ಟೇನಲ್ಲಿ ಗೆಳತಿಯೊಂದಿಗೆ ತಂಗಿದ್ದ ಮಹೇಶ್ ನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲಾಗಿದೆ. ಯುವತಿಯೊಂದಿಗೆ ಇನ್ನು ಕೆಲವರು ಸೇರಿಕೊಂಡು ಮಹೇಶ್ ನನ್ನು ಬೆತ್ತಲಾಗಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ ಅವರಿಂದ ತಪ್ಪಿಸಿಕೊಳ್ಳಲು ಬೆತ್ತಲಾಗಿ ರಸ್ತೆಗೆ ಓಡಿ ಬಂದಿದ್ದಾನೆ.
ವಿಚಾರಣೆ ನಡೆಸಿದಾಗ ಫೇಸ್ಬುಕ್ ಗೆಳತಿಗಾಗಿ ಮಹೇಶ್ ಎನ್ನುವ ಯುವಕ ಮಡಿಕೇರಿಗೆ ಬಂದಿದ್ದ ಹೋಂ ಸ್ಟೇನಲ್ಲಿ ಹನಿ ಟ್ರ್ಯಾಪ್ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದ್ದು ಹನಿ ಟ್ರ್ಯ್ಯಾಪಿಗೆ ಒಳಗಾಗಿ ಮಹೇಶ್ ಬೆತ್ತಲಾಗಿ ಹೋಂ ಸ್ಟೇ ನಿಂದ ಬೆತ್ತಲಾಗಿ ಹೊರಗಡೆ ಓಡಿ ಬಂದಿದ್ದನ್ನು ನೋಡಿ ಜನ ಶಾಕ್ ಆಗಿದ್ದಾರೆ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಹನಿಟ್ರ್ಯಾಪ್ ಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.