newsics.com
ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಸಾಮಾನ್ಯವಾಗಿ ಕಂಡರೂ ಜಗತ್ತಿನೆಲ್ಲೆಡೆ ಪ್ರತಿ ಒಂದು ಗಂಟೆಗೆ 26 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ ಎಂಬುದು ಆತಂಕಕಾರಿಯಾಗಿದೆ. ಈ ರೀತಿ ನೀರಿನ ಅವಘಡದಿಂದ ಜಾಗತಿಕವಾಗಿ ದಿನವೊಂದಕ್ಕೆ 350 ಹಾಗೂ ಪ್ರತಿ ವರ್ಷ 2,36,000 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ನೈರುತ್ಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರು ನೀಡಿದ್ದಾರೆ.
ಜುಲೈ 25ರ ವಿಶ್ವ ಮುಳುಗುವಿಕೆ ತಡೆಗಟ್ಟುವ ದಿನದ ಹಿನ್ನೆಲೆ ಈ ಕುರಿತು ಮಾತನಾಡಿರುವ ಅವರು, ನೀರಿನಿಂದ ಮುಳುಗಿ ಸಾವು ಮತ್ತು ಇತರೆ ಗಾಯಗಳಿಗೆ ಗುರಿಯಾಗುವ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.
2019ರಲ್ಲಿ ಈ ರೀತಿ ಮುಳುಗಿ ನೈರುತ್ಯ ಏಷ್ಯಾದಲ್ಲಿ 70,034 ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನೆಲ್ಲೆಡೆ ಈ ರೀತಿ ನೀರಿನ ಅವಘಡದಿಂದ ಸಾವಿನಲ್ಲಿ ಎರಡನೇ ಸ್ಥಾನವನ್ನು ಇದು ಹೊಂದಿದೆ ಎಂದಿದ್ದಾರೆ.