newsics.com
ಈ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ವಾಹನಗಳಿಗೆ ಇಂತಿಷ್ಟು ದರ ನಿಗದಿ ಮಾಡಲಾಗಿದೆ. ಸಾರಿಗೆ ಕಚೇರಿಯಿಂದಲೇ ಮಾಲಿನ್ಯ ನಿಯಂತ್ರಣದ ಸ್ಥಿತಿಗತಿ ಪ್ರಮಾಣಪತ್ರದ ಮೂಲಕ ವರದಿ ನೀಡುವ ಕೇಂದ್ರಗಳು ಕರ್ನಾಟಕದ ನಾನಾ ಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಈಗ ಈ ತಪಾಸಣೆ ದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ.
ಕರ್ನಾಟಕ ಹೊರಸೂಸುವಿಕೆ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘಗಳು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಬಾಡಿಗೆ, ಹೊರಸೂಸುವಿಕೆ ಪರಿಶೀಲನಾ ಉಪಕರಣಗಳು, ಸಂಬಳ ಮತ್ತು ಖರ್ಚು ವೆಚ್ಚ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ನೀಡಿ ದರಗಳನ್ನು ಪರಿಷ್ಕರಿಸುವಂತೆ ವಿನಂತಿಸಿವೆ. ‘ಮಾಲಿನ್ಯ ನಿಯಂತ್ರಣ’ ಪ್ರಮಾಣಪತ್ರದ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸುಮಾರು ಮೂರು ವರ್ಷಗಳ ಹಿಂದೆ ದರಗಳನ್ನು ಹೆಚ್ಚಿಸಲಾಗಿದೆ. ಈಗ ದರ ಪರಿಷ್ಕರಣೆಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಸಂಘದ ಸದಸ್ಯರೊಬ್ಬರು ತಿಳಿಸಿದ್ದಾಗಿ ವರದಿ ಮಾಡಿದೆ.
ಇಲ್ಲಿಯವರೆಗೆ, ದ್ವಿಚಕ್ರ ವಾಹನಗಳು 65 ರೂ, ಆಟೋಗಳು 75 ರೂ, ನಾಲ್ಕು ಚಕ್ರಗಳ ಪೆಟ್ರೋಲ್ ವಾಹನಗಳು 115 ರೂ ಮತ್ತು ಡೀಸೆಲ್ ವಾಹನಗಳು ಪಿಯುಸಿ ಪ್ರಮಾಣಪತ್ರಗಳಿಗೆ 160 ರೂ ಪಾವತಿಸುತ್ತಿವೆ. ದ್ವಿಚಕ್ರ ವಾಹನಗಳ ಹೊರಸೂಸುವಿಕೆ ದರ ಪ್ರಮಾಣ ಪತ್ರ ನೀಡುವ ದರವನ್ನು 110 ರೂ.ಗೆ , ಆಟೋಗಳಿಗೆ 100 ರೂ. ಕ್ಕೆ, ನಾಲ್ಕು ಚಕ್ರಗಳ ಪೆಟ್ರೋಲ್ ಮತ್ತು ಸಿಎನ್ ಜಿ ವಾಹನಗಳ ಹೊರಸೂಸುವಿಕೆ ದರವನ್ನು 200ಕ್ಕೆ ಮತ್ತು ಡೀಸೆಲ್ ವಾಹನಗಳ ಹೊರಸೂಸುವಿಕೆ ಪ್ರಮಾಣ ಪತ್ರ ನೀಡುವ ದರವನ್ನು 250 ರೂ.ಗೆ ಹೆಚ್ಚಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.