newsics.com
ನವದೆಹಲಿ: ಎರಡು ವರ್ಷದ ಹಿಂದಷ್ಟೇ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡು ಪ್ರೊಬೆಷನರಿ ಅವಧಿಯಲ್ಲಿದ್ದ ಮಹಾರಾಷ್ಟ್ರದ ಪೂಜಾ ಖೇಡ್ಕರ್(Puja Khedkar) ಅವರ ನೇಮಕಾತಿಯನ್ನೇ ಕೇಂದ್ರ ಲೋಕಸೇವಾ ಆಯೋಗ( UPSC) ರದ್ದುಗೊಳಿಸಿದೆ.
ತೀವ್ರ ವಿವಾದಕ್ಕೆ ಗುರಿಯಾಗಿದ್ದ ಪೂಜಾ ಖೇಡ್ಕರ್ ಅವರ ನೇಮಕ, ದಾಖಲೆಗಳ ಕುರಿತು ವಿಸ್ತೃತ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ ಆಯೋಗವು ಈ ನಿರ್ಧಾರ ಪ್ರಕಟಿಸಿದೆ.
ದಾಖಲೆಗಳನ್ನು ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು. ಪೂಜಾ ವಿರುದ್ಧ ಕಾನೂನು ಕ್ರಮವೂ ಜಾರಿಯಾಗುವ ಸಾಧ್ಯತೆಗಳಿವೆ.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಲೋಕಸೇವಾ ಆಯೋಗದ ನೇಮಕದ ನಂತರ ರದ್ದುಗೊಂಡಿರುವ ಮೊದಲ ಅಭ್ಯರ್ಥಿ ಇವರು. ಈ ಕುರಿತು ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಮಾತ್ರವಲ್ಲದೆ ಆಡಳಿತಾತ್ಮಕ ವಲಯದಲ್ಲೂ ಪೂಜಾ ನಡವಳಿಕೆ, ಅವರ ಪೋಷಕರ ವರ್ತನೆ ಬಗ್ಗೆ ಚರ್ಚೆ ನಡೆದಿತ್ತು.
ಖೇಡ್ಕರ್ ಅವರು ದೃಷ್ಟಿದೋಷದ ನೆಪದಲ್ಲಿ ಅಂಗವಿಕಲರ ಕೋಟಾದಡಿ ಯುಪಿಎಸ್ಸಿಯಲ್ಲಿ ಅವಕಾಶ ಪಡೆದಿದ್ದರು. ಹಿಂದುಳಿದ ವರ್ಗಗಳ ಖೋಟಾವನ್ನೂ ಬಳಸಿಕೊಂಡಿದ್ದರು. ಅವರನ್ನು ಮಹಾರಾಷ್ಟ್ರಕ್ಕೆ ನಿಯೋಜಿಸಲಾಗಿತ್ತು.
ಪುಣೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಜಿಲ್ಲಾಧಿಕಾರಿಯೊಂದಿಗೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದರು. ಪ್ರತ್ಯೇಕ ಕಾರು, ಬಂಗಲೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆದೇಶಿಸಿದ್ದರು. ಅಲ್ಲದೇ ಖಾಸಗಿ ಕಾರಿಗೇ ಕೆಂಪು ದೀಪ ಅಳವಡಿಸಿಕೊಂಡಿದ್ದರು.
ಈ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಪುಣೆ ಡಿಸಿ ಪತ್ರ ಬರೆದಿದ್ದರು. ಆನಂತರ ಪೂಜಾ ಖೇಡ್ಕರ್ ಅವರ ನೇಮಕದ ಕುರಿತೇ ಅನುಮಾನಗಳು ಶುರುವಾಗಿ ಯುಪಿಎಸ್‌ಪಿ ತನಿಖೆಗೆ ಆದೇಶಿಸಿತ್ತು. ಅದರಲ್ಲೂ ಅವರು ಉಪಯೋಗಿಸಿಕೊಂಡಿದ್ದ ಕೋಟಾ ದುರ್ಬಳಕೆ ಮಾಡಿಕೊಂಡ ಅನುಮಾನಗಳಿದ್ದವು. ಅವರ ತಂದೆಯೂ ಅಧಿಕಾರಿಯಾದ್ದರಿಂದ ಪ್ರಭಾವ ಬಳಸಿದ ಆರೋಪ ಕೇಳಿಬಂದಿತ್ತು. ಈಗ ತನಿಖೆ ನಡೆಸಿ ಈ ಕ್ರಮ ಜಾರಿಯಾಗಿದೆ.
ತನ್ನ ದೇಹದ ನ್ಯೂನತೆಯ ಗುರುತನ್ನು ನಕಲಿ ಮಾಡುವ ಮೂಲಕ ಅನುಮತಿಸಲಾದ ಮಿತಿಯನ್ನು ಮೀರಿ ಪರೀಕ್ಷಾ ಪ್ರಯತ್ನಗಳನ್ನು ಮೋಸದಿಂದ ಪಡೆದುಕೊಂಡಿದ್ದಕ್ಕಾಗಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ರದ್ದುಗೊಳಿಸಿದೆ.
ನಾಗರಿಕ ಸೇವಾ ಪರೀಕ್ಷೆ (ಸಿಎಸ್ಇ) -2022 ರ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿದ ಆರೋಪದಲ್ಲಿ ಪೂಜಾ ಖೇಡ್ಕರ್ ಅವರನ್ನು ಯುಪಿಎಸ್ಸಿ ಮುಂದಿನ ಎಲ್ಲಾ ಪರೀಕ್ಷೆಗಳಿಗೆ ನಿಷೇಧ ಹೇರಿದೆ.
https://x.com/ANI/status/1818587257189941387?t=fRo_LsBn2SciNnDxrKq78g&s=19
ನಡುಬೀದಿಯಲ್ಲೇ ಯುವತಿ ಬೆತ್ತಲೆಗೊಳಿಸಿದ ಮಂಗಳಮುಖಿಯರು, ಮನಸೋಇಚ್ಛೆ ಹಲ್ಲೆ
ರೊಮ್ಯಾನ್ಸ್ ಮಾಡುತ್ತಲೇ ಕಾರು ಚಾಲನೆ, ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ