newsics.com
ಜುಲೈ ತಿಂಗಳು ಮುಗಿದಿದ್ದು ನಾಳೆಯಿಂದ ಆಗಸ್ಟ್ ಆರಂಭ ಆಗಲಿದೆ. ಆಗಸ್ಟ್ ಮೊದಲ ದಿನದಿಂದ ದೇಶದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ. ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಜೊತೆಗೆ ಅನೇಕ ಲಾಭವನ್ನೂ ನಿರೀಕ್ಷೆ ಮಾಡಬಹುದಾಗಿದೆ. ಅದು ನೇರವಾಗಿ ಅಡುಗೆ ಮನೆಯಿಂದಲೇ ಶುರುವಾದರೂ ಅಚ್ಚರಿ ಇಲ್ಲ. ಕ್ರೆಡಿಡ್ ಕಾರ್ಡ್, ಎಲ್ಪಿಜಿ ಸಿಲಿಂಡರ್, ಪೇಯಿಂಗ್ ಆ್ಯಪ್ಗಳು ಸೇರಿದಂತೆ ಪ್ರಮುಖ ಐದು ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇದೆ.
ತೈಲ ಕಂಪನಿಗಳು ಪ್ರತಿ ತಿಂಗಳು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ ನಾಳೆ ಬೆಳಗ್ಗೆ 6 ಗಂಟೆ ವೇಳೆಗೆ ಎಲ್ಪಿಜಿ ಸಿಲಿಂಡರ್ಗೆ ಹೊಸ ಬೆಲೆ ನಿಮಗೆ ಸಿಗುವ ಸಾಧ್ಯತೆ ಇದೆ. ಇತ್ತೀಚೆಗಿನ ತಿಂಗಳಲ್ಲಿ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ನಿರಂತರವಾಗಿ ಬದಲಾಯಿಸುತ್ತ ಬಂದಿವೆ. ಆದರೆ 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ ಆಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಅದು ಏನಾಗುತ್ತೋ ಅನ್ನೋದ ನಾಳೆ ಗೊತ್ತಾಗಲಿದೆ.
ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಮಾಡಿದಂತೆ ತೈಲ ಕಂಪನಿಗಳು ಏರ್ ಇಂಧನದ ಬೆಲೆಯನ್ನು ಪರಿಷ್ಕೃರಣೆ ಮಾಡುತ್ತವೆ. ಏರ್ ಟ್ರೈಬನ್ ಇಂಧನ (ATF) ಹಾಗೂ ಸಿಎನ್ಜಿ-ಪಿಎನ್ಜಿ ಬೆಲೆಯೂ ಪರಿಷ್ಕೃತಗೊಳ್ಳಲಿದೆ. ಏಪ್ರಿಲ್ ಆರಂಭದಲ್ಲಿ ಎಟಿಎಫ್ ಬೆಲೆ ಕಡಿಮೆ ಮಾಡಲಾಗಿತ್ತು.
ನಾಳೆಯಿಂದ HDFC ಬ್ಯಾಂಕ್ ದೊಡ್ಡ ಬದಲಾವಣೆ ತರುತ್ತಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇದರ ಎಫೆಕ್ಟ್ ನೇರವಾಗಿ ತಟ್ಟಲಿದೆ. CRED, Paytm, Mobikwik ನಂತರ ಆ್ಯಪ್ಗಳ ಸಹಾಯದಿಂದ ಕ್ರೆಡಿಡ್ ಕಾರ್ಡ್ ಮೂಲಕ ಕರೆಂಟ್ ಪಾವತಿಸಿದರೆ ಶೇಕಡಾ 1 ರಷ್ಟು ಶುಲ್ಕ ವಿಧಿಸಲಿದೆ. ಪ್ರತಿ ವಹಿವಾಟಿನ ಮಿತಿಯನ್ನು ಮೂರು ಸಾವಿರ ರೂಪಾಯಿಗೆ ನಿಗಧಿ ಮಾಡಿದೆ. 15 ಸಾವಿರ ರೂಪಾಯಿಗಿಂತ ಕಡಿಮೆ ವಹಿವಾಟುಗಳಿಗೆ, ಇಂಧನ ವಹಿವಾಟಿನ ಮೇಲೆ ಯಾವುದೇ ಶುಲ್ಕಗಳನ್ನು ವಿಧಿಸುತ್ತಿಲ್ಲ.