newsics.com
ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ಮೇಲೆ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಸೈಬರ್ ಕಳ್ಳರು ಫೋನ್ನಿಂದ ವೈಯಕ್ತಿಕ ಡೇಟಾ, ಫೈಲ್ಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕದಿಯುತ್ತಿದ್ದಾರೆ. ಹೀಗಾಗಿ ಮೊಬೈಲ್ನಲ್ಲಿ ಬ್ಯಾಂಕ್ ಖಾತೆ ನಿರ್ವಹಿಸಲು ಭಯವಾಗುತ್ತದೆ.
ಆದ್ರೆ ಆಂಡ್ರಾಯ್ಡ್ ಲಾಕ್ಡೌನ್ ಮೋಡ್ ವಿಧಾನವನ್ನು ಬಳಸುವ ಮೂಲಕ ಸೈಬರ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಸಾಮಾನ್ಯವಾಗಿ, ಪಿನ್ ಸಂಖ್ಯೆ, ಪಾಸ್ವರ್ಡ್, ಪ್ಯಾಟರ್ನ್ ಗೊತ್ತಿಲ್ಲ ಎಂದಾದಲ್ಲಿ ಫೋನ್ ಅನ್ನು ಬಳಸಲು ಅಸಾಧ್ಯ. ಇನ್ನು ಡೇಟಾ ಕದಿಯುವುದು ದೂರದ ಮಾತು. ಹಾಗೊಂದು ವೇಳೆ ಮಾಹಿತಿ ಇತ್ತು ಎಂದಾದರೂ, ಈ ಲಾಕ್ಡೌನ್ ಮೋಡ್ ಅನ್ನು ಆನ್ ಮಾಡಿದರೆ, ಮೊಬೈಲ್ನ ಆಳಕ್ಕೆ ಇಳಿಯಲು ಸಾಧ್ಯವೇ ಇಲ್ಲ. ಒಮ್ಮೆ ಈ ಮೋಡ್ ಮೊಬೈಲ್ನಲ್ಲಿ ಆನ್ ಮಾಡಿದರೆ, ಎಲ್ಲಾ ಬಯೋಮೆಟ್ರಿಕ್ ಅನ್ಲಾಕಿಂಗ್ ಕಾರ್ಯವಿಧಾನಗಳು ಸ್ವಯಂ ಆಫ್ ಆಗುತ್ತವೆ. ಆಗ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ.
ನಿಮ್ಮ ಮೊಬೈಲ್ನ ಸೆಟ್ಟಿಂಗ್ಗೆ ಹೋಗಿ, ಅಲ್ಲಿ ನೀವು ಅನ್ಲಾಕ್ ಮೋಡ್ ಎಂದು ಸರ್ಚ್ ಮಾಡಬೇಕು. ಬಳಿಕ ಅಲ್ಲಿನ ಅನ್ಲಾಕ್ ಮೋಡ್ ಅನ್ನು ಆನ್ ಮಾಡಬೇಕು. ಬಳಿಕ ಇದು ನಿಮ್ಮ ಮೊಬೈಲ್ ಅನ್ನು ಸೆಕ್ಯೂರಿಟಿ ಮೋಡ್ಗೆ ಹಾಕುತ್ತದೆ. ಅಂದರೆ, ಭದ್ರತಾ ಕವಚ ಆರಂಭವಾದಂತೆ. ಈ ಮೋಡ್ ಆರಂಭಿಸಿದ ಬಳಿಕ, ನಿಮ್ಮ ಮೊಬೈಲ್ ಅನ್ನು ಯಾರಾದರೂ ತೆಗೆದುಕೊಂಡು ಅಥವಾ ಹ್ಯಾಕ್ ಮಾಡಿ ಡೇಟಾ ಹುಡುಕಿದೆ, ತಕ್ಷಣವೇ ಲಾಕ್ಡೌನ್ ಮೋಡ್ ಸಕ್ರಿಯವಾಗುತ್ತದೆ.