Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೇರಳ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈ ವೇಳೆ ನಡೆದ ವಿದ್ಯಮಾನವೊಂದು ಈಗ ಇಡೀ ದೇಶದ ಗಮನಸೆಳೆದಿದೆ.
ಮುನ್ನಾರ್ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸೋನಿಯಾ ಗಾಂಧಿಗೆ ಟಿಕೆಟ್ ನೀಡಿದೆ! ಕೇರಳದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಈ ವೇಳೆ ಮುನ್ನಾರ್‌ನ ಮೂಲಕ್ಕಡ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ. ಹಾಗಂತ ಬಿಜೆಪಿ ತಪ್ಪಾಗಿ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟಿಲ್ಲ. ಇಲ್ಲಿ ನಿಜಕ್ಕೂ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ.

ಯಾರಿದು ಸೋನಿಯಾ ಗಾಂಧಿ?
ಮುನ್ನಾರ್ ಮೂಲಕ್ಕಾಡ್ ಪಂಚಾಯತ್ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ. ಈ ಅಭ್ಯರ್ಥಿ ಹೆಸರೇ ಸೋನಿಯಾ ಗಾಂಧಿ. ಹೆಸರಿನ ಹಿಂದೆ ದೊಡ್ಡ ಇತಿಹಾಸವೂ ಇದೆ. ಈ ಅಭ್ಯರ್ಥಿಯ ತಂದೆ ಹೆಸರು ದುರೆ ರಾಜ್. ಕಟ್ಟಾ ಕಾಂಗ್ರೆಸ್ ನಾಯಕ. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕಾಂಗ್ರೆಸ್‌ನ ಕಟ್ಟಾಳುವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ದುರೆ ರಾಜ್, ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಮೇಲಿನ ಅಭಿಮಾನಕ್ಕೆ ತನ್ನ ಮಗಳಿಗೆ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು. ಇದೇ ಸೋನಿಯಾ ಗಾಂಧಿ ಇದೀಗ ಮುನ್ನಾರ್ ಪಂಚಾಯತ್‌ನ ಬಿಜೆಪಿ ಅಭ್ಯರ್ಥಿ!
ದುರೆ ರಾಜ್ ಕಾಂಗ್ರೆಸ್‌ನ ಹಿರಿಯ ನಾಯಕರು. ಆದರೆ ಮಗಳು ಸೋನಿಯಾ ಗಾಂಧಿ ಮದುವೆಯಾದ ಬಳಿಕ ಬಿಜೆಪಿ ಸೇರಿದ್ದಾರೆ. ಸೋನಿಯಾ ಗಾಂಧಿ ಬಿಜೆಪಿ ಸ್ಥಳೀಯ ಮುಖಂಡ ಸುಭಾಷ್ ಮದುವೆಯಾದ ಬಳಿಕ ಪಾರ್ಟಿ ಬದಲಾಯಿತು. ಸೋನಿಯಾ ಗಾಂಧಿ ಬಿಜೆಪಿ ಸೇರಿಕೊಂಡು ಕೆಲಸ ಆರಂಭಿಸಿದ್ದರು. ಈ ಬಾರಿ ಸೋನಿಯಾ ಗಾಂಧಿ ಪಂಚಾಯತ್ ಚುನಾವಣೆ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ಗೆ ಸಂಕಷ್ಟ
ಮುನ್ನಾರ್ ಪಂಚಾಯತ್ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪ್ರಬಲ ಕ್ಷೇತ್ರವಾಗಿದೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ರಮೇಶ್‌ಗೆ ಸಂಕಷ್ಟ ಹೆಚ್ಚಾಗಿದೆ. ಸೋನಿಯಾ ಗಾಂಧಿ ಅನ್ನೋ ಹೆಸರೇ ಹಲವು ಮತಗಳನ್ನು ಸೆಳೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಸೋನಿಯಾ ಗಾಂಧಿ ಬಿಜೆಪಿಯಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೇರಳ ಸ್ಥಳೀಯ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಡಿಸೆಂಬರ್ 9 ಹಾಗೂ 11ರಂದು ನಡೆಯಲಿದೆ. ಡಿಸೆಂಬರ್ 13ರಂದು ಫಲಿತಾಂಶ ಘೋಷಣೆಯಾಗಲಿದೆ.
ತೊಡೆ ಮುಟ್ತಾಳೆ, ಪಕ್ಕದಲ್ಲೇ ಕುಳಿತು ಟೆಂಪ್ಟ್ ಮಾಡ್ತಾಳೆ… ಮಹಿಳಾ ಬಾಸ್ ವರ್ತನೆಯಿಂದ ನೊಂದ ಯುವ ಉದ್ಯೋಗಿ