newsics.com
ಕೃತಿ ಸನನ್ ಮತ್ತು ಕಬೀರ್ ಬಹಿಯಾ ಪರಸ್ಪರ ಹತ್ತಿರವಾಗಿದ್ದಾರೆ ಎಂಬ ರೂಮರ್ಸ್ ಈ ವರ್ಷದ ಆರಂಭದಲ್ಲಿ ಕೇಳಿ ಬಂದಿತ್ತು. ಇಬ್ಬರೂ ದುಬೈನಲ್ಲಿರುವ ಫೋಟೋಸ್ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ಈ ನಟಿ ಕೃತಿ ಹೆಸರು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಜೊತೆ ತಳುಕು ಹಾಕಿಕೊಂಡಿತ್ತು. ಆದ್ರೆ ಇದುವರೆಗೂ ನಟಿ ರೂಮರ್ಸ್ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇದೀಗ ಕೃತಿ ಮಿಲಿಯನೇರ್ ಉದ್ಯಮಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ.
ನಟಿ ಕೃತಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ತೀರ ಅಪರೂಪ. ಆದ್ರೆ ಇತ್ತೀಚೆಗೆ ಅವರ ಹುಟ್ಟುಹಬ್ಬದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೃತಿ ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹರಿದಾಡ್ತಿದೆ. 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ನಟಿ ಕೃತಿಯ ಫೋಟೋಗಳು ವೈರಲ್ ಆಗಿದೆ.
ನಟಿ ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಫೋಟೋಗಳಲ್ಲಿ ನಟಿ ತನ್ನ ಗೆಳೆಯನೊಂದಿಗೆ ಕಾಣಿಸಿಕೊಂಡಿರುವ ಕಾರಣ ಈ ರೂಮರ್ಸ್ ನಿಜ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಇಬ್ಬರ ಲವ್ ಮ್ಯಾಟರ್ ಇದೀಗ ಫುಲ್ ವೈರಲ್ ಆಗ್ತಿದೆ. ಕಬೀರ್ ಜೊತೆ ಕೃತಿ ಡೇಟಿಂಗ್ ಮಾಡೋದು ಪಕ್ಕಾ ಆದ್ರೆ ಶೀಘ್ರದಲ್ಲೇ ಬಾಲಿವುಡ್ ಬ್ಯೂಟಿ ಹಸೆಮಣೆ ಏರಲಿದ್ದಾರೆ. ಬಾಲಿವುಡ್ ನಲ್ಲಿ ಮತ್ತೊಂದು ಅದ್ಧೂರಿ ಕಲ್ಯಾಣ ಸದ್ದು ಮಾಡಲಿದೆ.