newsics.com
ಕೇರಳ: ಕೇರಳದ ವಯನಾಡ್ನಲ್ಲಿ ಭೂಕುಸಿತುಗಳು ಸರ್ವೇ ಸಾಮಾನ್ಯ ಎನ್ನುವಂತಾಗಿ ಹೋಗಿವೆ. ಅದಕ್ಕೆ ಹಲವು ಕಾರಣಗಳನ್ನು ಕೂಡ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಂಡು ಬಂದಿರೋದು ಶುಂಠಿ ಬೆಳೆ.
ವಿಜ್ಞಾನಿಗಳು ಹೇಳುವ ಪ್ರಕಾರ ಈ ರೀತಿಯ ಭೂಕುಸಿತಕ್ಕೆ ಹೆಚ್ಚಾಗುತ್ತಿರುವ ಶುಂಠಿ ಬೆಳೆ ಕಾರಣ ಎಂದು ಹೇಳುತ್ತಿದ್ದಾರೆ. ಶುಂಠಿ ಬೆಳೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಹಾಗೂ ಶಕ್ತಿಯನ್ನ ಕಳೆದುಕೊಳ್ಳುತ್ತದೆ. ಭೀಕರ ಮಳೆಗಳನ್ನು ಎದುರಿಸುವ ಸಾಮರ್ಥ್ಯ ನೆಲದಲ್ಲಿ ಉಳಿಯುವುದಿಲ್ಲ. ಹೀಗಾಗಿ ಈ ಕಡೆ ಪದೇ ಪದೇ ಭೂಕುಸಿತ ನಡೆಯುತ್ತಲೇ ಇರುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭೂಮಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡು ಈ ರೀತಿಯಾದ ಭೂಕುಸಿತಕ್ಕೆ ಕಾರಣವಾಗುತ್ತ್ತದೆ. ಇನ್ನು ಶುಂಠಿ ಬೆಳೆಯೂ ಕೂಡ ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಮಣ್ಣಿನ ಅಡಿಯಲ್ಲಿ ಪೊಳ್ಳು ಭಾಗದಲ್ಲಿ ನೀರು ಹರಿಯೋದು ಹೆಚ್ಚಳಗೊಂಡು ಭೂಕುಸಿತಕ್ಕೆ ಕಾರಣವಾಗುತ್ತದೆ. ಜೊತೆಗೆ ಬೆಟ್ಟ ಗುಡ್ಡಗಳ ಮೇಲೆ ಅವೈಜ್ಞಾನಿಕವಾಗಿ ಕಟ್ಟು ಕಟ್ಟಡಗಳು ಕೂಡ ಇಂತಹ ಭೂಕುಸಿತಕ್ಕೆ ನೇರ ಕಾರಣವಾಗುತ್ತವೆ. ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಕಲ್ಲು ಗಣಿಗಾರಿಕೆಯೂ ನಡೆಯುತ್ತಿರುವುದರಿಂದಲೂ ಭೂಮಿಯ ನೀರು ಹೀರಿಕೊಳ್ಳುವ ಗುಣ ಕಳೆದುಕೊಳ್ಳುತ್ತದೆ ಇದರಿಂದಾಗಿಯೂ ಭೂಕುಸಿತದಂತಹ ದುರಂತಗಳು ಸಂಭವಿಸುತ್ತಿವೆ.
ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದ ಸುದ್ದಿಗಳು ಇಂದು ನಿನ್ನೆಯದಲ್ಲ. ಹಲವು ಬಾರಿ ಇಲ್ಲಿಯ ಬೊಜ್ಜು ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಕುಸಿದು ಬೀಳುತ್ತದೆ. ಈ ಹಿಂದೆ 2019ರಲ್ಲಿ ಮೆಪ್ಪಾಡಿಯಲ್ಲಿ ಭೂ ಕುಸಿತ ಸಂಭವಿಸಿತ್ತು.