Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಷ್ಟು ದಿನ ಅಶ್ವಿನಿ ಗೌಡ ಮತ್ತು ಗಿಲ್ಲಿ ಸದ್ದು ಕೇಳಿ ಬರುತ್ತಿದ್ದ ಮನೆಯಲ್ಲಿ ಇದೀಗ ರಜತ್ ಮತ್ತು ಚೈತ್ರಾ ಕುಂದಾಪುರ ಎಂಟ್ರಿಯಿಂದ ಮತ್ತಷ್ಟು ರೋಚಕತೆ ಪಡೆಯುವ ಸಾಧ್ಯತೆ ಇದೆ. ಇದರ ನಡುವೆ ವಿಕೆಂಡ್‌ನಲ್ಲಿ ಟಾಪ್ ಸ್ಪರ್ಧಿಯೊಬ್ಬರು ಎಲಿಮಿನಿನೇಟ್ ಆಗಿದ್ದಾರೆ.
ಹೌದು.. 5 ಮಂದಿ ಅತಿಥಿಗಳ ಪ್ರವೇಶದಿಂದ ಬಿಗ್ ಹೌಸ್ ಫೈಟ್ ರಿಂಗ್ ಆಗಿತ್ತು. ಮನೆ ಮಂದಿ ಗಿಲ್ಲಿಯದ್ದು ತಪ್ಪು ಅಂದ್ರೆ, ಕೆಲ ಸ್ಪರ್ಧಿಗಳು ಗಿಲ್ಲಿ ಪರ ಬ್ಯಾಟ್ ಬೀಸಿದರು. ಪ್ರಸ್ತುತ ಬಿಗ್ ಹೌಸ್‌ಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹಿಂದಿನ ಸೀಸನ್‌ನ ಸ್ಪರ್ಧಿಯಾಗಿದ್ದ ರಜತ್ ಮತ್ತು ಚೈತ್ರಾ ದೊಡ್ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ..
ಇದರ ನಡುವೆ ಇದೀಗ ಟಾಪ್ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಪರ್ಧಿ ಬೇರೆಯಾರೂ ಅಲ್ಲ, ಜಾಹ್ನವಿ ಗೌಡ… ಹೌದು.. ಈ ವಾರ ಜಾಹ್ನವಿ ಗೌಡ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ಇಂದು (30 ಭಾನುವಾರ) ಸಂಡೆ ವಿಥ್ ಭಾದ್ ಶಾ ಸುದೀಪ್ ಸಂಚಿಕೆಯಲ್ಲಿ ಹೊರ ಬಿಳಲಿದೆ.
ಅಶ್ವಿನಿ ಗೌಡ ಜೊತೆಯಾಗಿ ಆಟ ಪ್ರಾರಂಭಿಸಿ ತಮ್ಮದೇ ಸ್ಟಾಟರ್ಜಿ ಮೆಂಟೈನ್ ಮಾಡುತ್ತಿದ್ದ ಜಾಹ್ನವಿ ಗೌಡ ಇಷ್ಟು ದಿನ ಸೆಫ್ ಝೋನ್‌ನಲ್ಲಿದ್ದರು. ಆದರೆ, ಇದೀಗ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಗಿಲ್ಲಿ ಜೊತೆ ಆಗಾಗ ಕಾಲ್ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದ ನಿರೂಪಕಿಯ ಆಟ ಮುಕ್ತಾಯಗೊಂಡಿದೆ ಎನ್ನಬಹುದು.