Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿತ್ವಾ ಚಂಡಮಾರುತದ ಪರಿಣಾಮ ಉಂಟಾಗಿದ್ದು, ಚಳಿ ಮತ್ತು ತುಂತುರು ಮಳೆಗೆ ಬೆಂಗಳೂರು ಜನ ನಡುಗಿದ್ದಾರೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ದಿನ ಮೈಕೊರೆಯುವ ಚಳಿ ಇರಲಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಚಳಿ ಮತ್ತು ಮಳೆಯಿಂದ ಎಚ್ಚರವಹಿಸುವಂತೆ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಎರಡು ದಿನಗಳಿಂದ ತಾಪಮಾನ ಹಠಾತ್ ಕುಸಿತಗೊಂಡಿದ್ದು, ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಇಳಿಯುವ ಸಾಧ್ಯತೆ ಇದ್ದು, 12 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯಬಹುದೆಂದು ಇಲಾಖೆ ತಿಳಿಸಿದೆ.
ಚಳಿಯಿಂದ ನಗರದಲ್ಲಿ ಮಂಜು ಕವಿದ ವಾತಾವರಣವಿದ್ದು, ಬೆಂಗಳೂರಿನ ವಾತಾವರಣ ನೋಡಿದರೆ ಮಿನಿ ಸ್ವಿಜರ್ಲ್ಯಾಂಡ್ನಂತೆ ಎನಿಸುತ್ತಿದೆ. ಮಾಲಿನ್ಯವೂ ಕಡಿಮೆ ಆಗಿರುವುದರಿಂದ ಒಂದು ವಾರದಿಂದ ಬೆಂಗಳೂರು ಹಳೆಯ ಬೆಂಗಳೂರು ರೀತಿಯಲ್ಲಿದೆ ಎಂದು ಕುಟುಂಬ ಸಮೇತ ವಾಕ್ಗೆ ಬಂದ ವಾಯು ವಿಹಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.