Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಂದು (ನವೆಂಬರ್ 27, ಗುರುವಾರ), ಹಂಸ ರಾಜಯೋಗ, ಅನಾಫ ಯೋಗ, ಧನ ಯೋಗ, ಧೃತಿ ಯೋಗದ ಜತೆ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ.
ವೃಷಭ ರಾಶಿಗೆ ಸೇರಿದ ಜನರ ಸುಖ, ಸಮೃದ್ಧಿಯಲ್ಲಿ ವೃದ್ದಿಯಾಗುವುದು. ನೀವು ಯಾವುದಾದರೂ ಕೆಲಸದಲ್ಲಿ ಅದ್ಭುತವಾದ ಫಲಿತಾಂಶವನ್ನು ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ದಿನವಾಗಿರಲಿದೆ. ಕೆಲಸದಲ್ಲಿ ನೀವು ಅನುಕೂಲಕರ ದಿನವನ್ನು ಹೊಂದುವಿರಿ. ನಿಮಗೆ ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕುವುದು. ಹೊಸ ವಾಹನ ಮತ್ತು ನಿಮ್ಮ ಸುಖ, ಸಮೃದ್ಧಿ ಹೆಚ್ಚಿಸುವಂತಹ ವಸ್ತುಗಳನ್ನು ಖರೀದಿಸಬೇಕೆಂದಿರುವವರಿಗೆ ಅದೃಷ್ಟದ ಬೆಂಬಲ ದೊರಕಲಿದೆ. ನಿಮಗೆ ಸಂತಾನ ಯೋಗ ಪ್ರಾಪ್ತಿಯಾಗುವ ಬಗ್ಗೆ ಶುಭ ಸುದ್ದಿ ಲಭಿಸುವ ಸಾಧ್ಯತೆಯಿದೆ. ನೀವಂದು ಕೊಂಡಂತಹ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಯಾವುದಾದರೂ ಸ್ನೇಹಿತರ ಮತ್ತು ಸಂಬಂಧಿಕರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನಾಳೆ ಸಂತೋಷಮಯ ದಿನವಾಗಿರುವುದು.
ಸಿಂಹ ರಾಶಿಗೆ ಸೇರಿದ ಜನರಿಗೆ ಗುರುವಾರ ಸಾಹಸಮಯವಾದ ಕೆಲಸಗಳಿಂದ ಲಾಭ ದೊರಕುವುದು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಯಶಸ್ಸು ಲಭಿಸಲಿದೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಪದವಿ ಮತ್ತು ಆರ್ಥಿಕ ಲಾಭ ದೊರಕಲಿದೆ. ತಂದೆಯ ಸಂಪೂರ್ಣ ಬೆಂಬಲ ದೊರಕುವುದು. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆದಾಯದಲ್ಲಿ ವೃದ್ದಿಯಾಗುವುದು. ಇಂದು ಉತ್ತಮ ಅವಕಾಶಗಳನ್ನು ಪಡೆಯುವುದರಿಂದ ಭವಿಷ್ಯದಲ್ಲಿ ಸಾಕಷ್ಟು ಲಾಭ ಗಳಿಸುವ ಸಂಭವವಿದೆ. ಆಸ್ತಿಗಾಗಿ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿರುವವರಿಗೆ, ಹೆಚ್ಚಿನ ಲಾಭ ದೊರಕುವುದು. ಪ್ರೀತಿಯ ಜೀವನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಒತ್ತಡಗಳು ದೂರವಾಗುವುದರಿಂದ ವೈವಾಹಿಕ ಜೀವನದಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಪಡೆಯುವಿರಿ.
ಕನ್ಯಾ ರಾಶಿಗೆ ಸೇರಿದ ಜನರಿಗೆ ಗುರುವಾರ ನೀವಂದುಕೊಂಡದ್ದಕ್ಕಿಂತ ಉತ್ತಮ ಫಲ ದೊರಕುವುದು. ನೀವು ಬೆಂಬಲ ಪಡೆಯುವಿರಿ ಎಂದು ಅಂದುಕೊಳ್ಳದೆ ವ್ಯಕ್ತಿಯಿಂದ ಸಹಾಯ ದೊರಕಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಉತ್ಸಾಹದಾಯಕವಾದ ಅವಕಾಶಗಳು ಲಭಿಸುವವು. ಅದೃಷ್ಟದ ಬೆಂಬಲದಿಂದಾಗಿ ಆರ್ಥಿಕ ಲಾಭದೊಂದಿಗೆ ಸುಖ, ಸಮೃದ್ಧಿಯನ್ನು ಗಳಿಸುವಿರಿ. ವಿದೇಶಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ವಿಶೇಷವಾಗಿ ಲಾಭ ದೊರಕಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಆರ್ಥಿಕ ಲಾಭ ಲಭಿಸುವುದು. ಯಾವುದಾದರೂ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರಯತ್ನಗಳಿಗೆ ಇಂದು ಉತ್ತಮ ದಿನವಾಗಿರಲಿದೆ. ಮನೆಯಲ್ಲಿ ಸಂತೋಷಮಯವಾದ ವಾತಾವರಣ ದೊರಕುವ ಅವಕಾಶವಿದೆ.
ಧನುಸ್ಸು ರಾಶಿಗೆ ಸೇರಿದ ಜನರಿಗೆ ಧನ, ಸಂಪತ್ತಿನಲ್ಲಿ ವೃದ್ದಿಯಾಗುವುದು. ಆಸ್ತಿಗೆ ಸಂಬಂಧಿಸಿದ ಯಾವುದಾದರೂ ವಿವಾದಗಳಿದ್ದರೆ, ಅವೆಲ್ಲವೂ ದೂರವಾಗುವುದರೊಂದಿಗೆ ಯಶಸ್ಸು ಗಳಿಸುವಿರಿ. ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಉತ್ತಮ ಪ್ರದರ್ಶನ ನೀಡುವಿರಿ. ಕೆಲಸ ಬದಲಾಯಿಸಬೇಕೆಂದು ಪ್ರಯತ್ನಪಡುತ್ತಿರುವ ಜನರಿಗೆ ಉತ್ತಮ ಅವಕಾಶಗಳು ದೊರಕುವವು. ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸುವುದರಿಂದ ಗೌರವ, ಖ್ಯಾತಿ ಹೆಚ್ಚಾಗುವುದು. ನಿಮ್ಮ ಯಾವುದಾದರೂ ದೊಡ್ಡ ಆಸೆ ಈಡೇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ಆರಂಭವನ್ನು ಹೊಂದುವಿರಿ ಅಥವಾ ಹೊಸ ಕೆಲಸವನ್ನು ಶುರು ಮಾಡಲು ಇಂದು ಉತ್ತಮ ದಿನವಾಗಿರುವುದು. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
ಮಕರ ರಾಶಿಗೆ ಸೇರಿದ ಜನರಿಗೆ ರಾಜರಂತಹ ಸಂತೋಷ ದೊರಕಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಯಾವುದಾದರು ಕೆಲಸ ಬಹಳ ಸಮಯದಿಂದ ಅಪೂರ್ಣಗೊಂಡಿದ್ದರೆ, ಇಂದು ಅವೆಲ್ಲ ಪೂರ್ಣಗೊಳ್ಳಲಿವೆ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕಬಹುದು. ಕೆಲಸದಲ್ಲಿ ಅಧಿಕಾರಿಗಳ ಸಂಪೂರ್ಣ ಬೆಂಬಲ ಪಡೆಯುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಆಸ್ತಿಯಲ್ಲಿ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಅಥವಾ ದೀರ್ಘಕಾಲೀನ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಉತ್ತಮ ದಿನವಾಗಿರುವುದು. ನಿಮ್ಮ ಕುಟುಂಬ ಜೀವನದಲ್ಲಿ ತಾಯಿ ಮತ್ತು ಸಂಗಾತಿಯ ಸಂಪೂರ್ಣ ಬೆಂಬಲ ದೊರಕುವುದು. ಸಂಜೆ ಮನೆಯವರೊಂದಿಗೆ ಸುಖಮಯವಾದ ಕ್ಷಣಗಳನ್ನು ಕಳೆಯುವಿರಿ. ಸುಖ ಸಮೃದ್ಧಿಯನ್ನು ಹೆಚ್ಚಿಸುವಂತಹ ವಸ್ತುಗಳನ್ನು ಖರೀದಿಸುವ ಯೋಗ ದೊರಕುವುದು.