Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Home Guard obscenely dance ಮಕ್ಕಳೆದುರೇ ಮಹಿಳೆ ಜತೆ ಗೃಹರಕ್ಷಕ ದಳ ಸಿಬ್ಬಂದಿ ಅಶ್ಲೀಲ ನೃತ್ಯ, ವೈರಲ್ ವಿಡಿಯೋ ನೋಡಿ
ದೇಶಪ್ರಮುಖವೈರಲ್

Home Guard obscenely dance ಮಕ್ಕಳೆದುರೇ ಮಹಿಳೆ ಜತೆ ಗೃಹರಕ್ಷಕ ದಳ ಸಿಬ್ಬಂದಿ ಅಶ್ಲೀಲ ನೃತ್ಯ, ವೈರಲ್ ವಿಡಿಯೋ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಿಜಯವಾಡ: ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬ ಮಹಿಳೆಯ ಜತೆಗೆ ಮಕ್ಕಳ ಮುಂದೆ ಅಶ್ಲೀಲ ನೃತ್ಯ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಅಶ್ಲೀಲ ನೃತ್ಯ ಮಾಡಿದ್ದ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಇಲ್ಲಿನ ಸ್ಥಳೀಯ ಪೊಲೀಸರಿಗೆ ಕೃಷ್ಣ ಜಿಲ್ಲೆಯ ಎಸ್. ಪಿ. ವಿದ್ಯಾಸಾಗರ ನಾಯ್ಡು ಅವರು ಆದೇಶ ಹೊರಡಿಸಿದ್ದಾರೆ.

ಸಿಬ್ಬಂದಿಯನ್ನು ಸಮಗ್ರ ತನಿಖೆಗೊಳಪಡಿಸಿ ಈ ಬಗ್ಗೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸದ್ಯ ಈ ಕುರಿತಾದ ವಿಡಿಯೋ ಹರಿದಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದೆ.

https://youtube.com/shorts/lz170Ix-h3c?si=eD4h4ILir5s72hOQ

ವಿಜಯವಾಡದಲ್ಲಿ ಗೃಹರಕ್ಷಕದಳದ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಜಯ್ ಕುಮಾರ್ ಮಕ್ಕಳ ಮುಂದೆ ಮಹಿಳೆ ಜತೆ ಅಸಭ್ಯವಾಗಿ ಅಶ್ಲೀಲ ನೃತ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದು ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆ ತರುವ ನಡವಳಿಕೆಯಾಗಿದೆ. ಈ ಬಗ್ಗೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿ ವಿ. ವಿದ್ಯಾಸಾಗರ್ ನಾಯ್ಡು ಅವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಅಜಯ್ ಕುಮಾರ್ ಅವರು ಜೀಪ್ ಚಾಲಕನಾಗಿದ್ದರೂ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಅವರಲ್ಲಿಯೂ ಇರಬೇಕಿತ್ತು, ಆದರೆ ಸ್ಥಳೀಯರ ಜತೆ ಸೇರಿಕೊಂಡು ಮಹಿಳೆ ಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡಿದ್ದು ತಿಳಿದುಬಂದಿದೆ.

ಆನ್‌ಲೈನ್‌ನಲ್ಲಿ ಈ ವಿಚಾರ ವ್ಯಾಪಕವಾಗಿ ಪ್ರಸಾರವಾಗಿ ಇಲಾಖೆಯ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಈ ಘಟನೆ ಮರುಕಳಿಸದಂತೆ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಎಸ್ಪಿ ಅವರು ಹೇಳಿಕೆ ನೀಡಿದ್ದಾರೆ.

ವೈರಲ್ ಆದ ಮೊಬೈಲ್ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ಎಸ್ಪಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ವಿಡಿಯೋ ದೃಶ್ಯಗಳ ಸತ್ಯಾ ಸತ್ಯತೆಯನ್ನು ದೃಢಪಡಿಸಿದ ಅನಂತರ, ಜಿಲ್ಲಾ ಪೊಲೀಸ್ ಕಚೇರಿಯಿಂದ ಸಿಬಂದಿಯನ್ನು ಅಮಾನತುಗೊಳಿಸುವ ಆದೇಶಗಳನ್ನು ಹೊರಡಿಸಲಾಗಿದೆ.

ವುಯ್ಯೂರು ಮಂಡಲದ ಗಂಡಿಕುಂಟ ಗ್ರಾಮದ ಮೂಲದ ಅಜಯ್ ಕುಮಾರ್ ತಮ್ಮ ಗ್ರಾಮದಲ್ಲಿ ನಡೆಯುವ ವಾರ್ಷಿಕ ಜಾನಪದ ರಂಗ ನಾಟಕದಲ್ಲಿ ಅಭಿನಯಿಸಲು ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಮನೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದೆವು. ಆಗ ಗ್ರಾಮಸ್ಥರು ಮತ್ತು ಮಕ್ಕಳು ಹಾಜರಿದ್ದರು. ಇದು ಉದ್ದೇಶಪೂರ್ವಕವಾಗಿ ಮಾಡಿದ್ದ ಕೃತ್ಯವಲ್ಲ. ಹೀಗಾಗಿ ಕ್ಷಮೆ ಕೋರಿ ಕಂಕಿಪಡು ಸಿಐ ಅವರಿಗೆ ಅಜಯ್ ಹೇಳಿದ್ದಾರೆ. ಆದರೆ ಬೇಜವಾಬ್ದಾರಿ ವರ್ತನೆ ವಿಚಾರ ಬಂದಾಗ ಯಾವುದೇ ದಯೆ ಇರುವುದಿಲ್ಲ ಎಸ್ಪಿ ಅವರು ಹೇಳಿದ್ದಾರೆ.

https://twitter.com/i/status/1993237333198688519

ತುಂಡುಡುಗೆಯ ನಿವೇದಿತಾ ಗೌಡರಿಗೇಕೆ ಈ ಪುಸ್ತಕ? ಎರಡನೇ ಮದುವೆಗೆ ರೆಡಿ ಆದ್ರಾ ಬೋಲ್ಡ್ ನಟಿ?

ನಟಿ ದೀಪಿಕಾ ಪಡುಕೋಣೆ ಬಿಸ್ನೆಸ್​ನಲ್ಲಿ ಕೋಟಿ ಕೋಟಿ ನಷ್ಟ

ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಾದರೆ ಈ ಎಲೆಗಳನ್ನು ತಿನ್ನಿ..!

TAGGED:Home Guard personnel dances obscenely with woman in front of childrenwatch viral video
Share This Article
Facebook Twitter Copy Link Print
Previous Article ಸ್ವಲ್ಪ ಕಾಯಿರಿ, ನಾನು ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ
Next Article ASTRO ಇಂದು ಹಂಸ-ಧನ ಯೋಗ, ಈ 5 ರಾಶಿಯವರಿಗೆ ಸಿಗಲಿದೆ ಸುಖ, ಸಮೃದ್ಧಿ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?