Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಜಶ್‌ಪುರ: 9ನೇ ತರಗತಿಯ ವಿದ್ಯಾರ್ಥಿನಿ ಖಾಸಗಿ ಶಾಲೆಯ ಅಧ್ಯಯನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಆಕೆ ಬರೆದಿಟ್ಟ ಸೂಸೈಡ್ ನೋಟ್ನಲ್ಲಿನ ಆರೋಪದ ಮೇಲೆ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.ಈ ಶಾಲೆಯು ಬಗಿಚಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯಲ್ಲಿದೆ. ಆ ಬಾಲಕಿ ನೆರೆಯ ಸುರ್ಗುಜಾ ಜಿಲ್ಲೆಯ ಸೀತಾಪುರ ಪ್ರದೇಶದ ನಿವಾಸಿಯಾಗಿದ್ದಾಳೆ.
ಪೊಲೀಸರಿಗೆ ಸ್ಥಳದಲ್ಲೇ ಸೂಸೈಡ್ ನೋಟ್ ಕೂಡ ಸಿಕ್ಕಿದೆ. ಅದರಲ್ಲಿ ಶಾಲೆಯ ಪ್ರಾಂಶುಪಾಲರಾದ ಕುಲ್ದಿಪನ್ ಟೋಪ್ನೋ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಇದಾದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.