Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಲಿವುಡ್‌ನ ಹೀಮ್ಯಾನ್ , ಮಾಜಿ ಸಂಸದ ಧರ್ಮೇಂದ್ರ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ಅವರ ಸಿನಿಮಾ ಲೈಫ್ ಎಷ್ಟು ಕಲರ್ಫುಲ್ ಆಗಿತ್ತೋ, ಅವರ ವೈಯಕ್ತಿಕ ಜೀವನ ಕೂಡ ಅಷ್ಟೇ ಸುದ್ದಿಯಲ್ಲಿತ್ತು.ವಿಶೇಷವಾಗಿ ಹೇಮಾ ಮಾಲಿನಿಯೊಂದಿಗಿನ ಅವರ ಎರಡನೇ ವಿವಾಹ, ಹಿಂದೂ ಕಾನೂನುಗಳನ್ನು ಮೀರಿ ಇಸ್ಲಾಂಗೆ ಮತಾಂತರಗೊಂಡಿದ್ದರೆ ಎಂಬ ವದಂತಿಗಳು ಮತ್ತು ದಿಲಾವರ್ ಖಾನ್ ಹೆಸರಿಗೆ ಬದಲಾವಣೆ ಕುರಿತು ಚರ್ಚೆ ನಡೆದಿದೆ.
ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರು. ತಮ್ಮ 19ನೇ ವಯಸ್ಸಿನಲ್ಲೇ ಧರ್ಮೇಂದ್ರ 1954 ರಲ್ಲಿ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಆದರೆ 1980 ರಲ್ಲಿ ಹೇಮಾ ಮಾಲಿನಿ ಅವರನ್ನು ಧರ್ಮೇಂದ್ರ ವಿವಾಹವಾದರು.
ಹೇಮಾ ಮಾಲಿನಿ ಜೀವನ ಚರಿತ್ರೆ ಪುಸ್ತಕ ʼಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪುಸ್ತಕದಲ್ಲಿ ರಾಮ್ ಕಮಲ್ ಮುಖರ್ಜಿ ಹಿಂದೂ ಧರ್ಮದಲ್ಲಿ ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಯಾಗುವುದು ಅಪರಾಧ. ಈ ಕಾರಣಕ್ಕೆ ಧರ್ಮೇಂದ್ರ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು.
ಮದುವೆಗಾಗಿಯೇ ಅವರು ತಮ್ಮ ಧರ್ಮವನ್ನು ಬದಲಾಯಿಸಬೇಕಾಯಿತು. ಈ ಸವಾಲಿನ ಸಮಯದಲ್ಲಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು ಎನ್ನಲಾಗಿದೆ . ತಮ್ಮ ಹೆಸರನ್ನು ಸಹ ಬದಲಾಯಿಸಬೇಕಾಯಿತು. ಇಸ್ಲಾಂ ಪ್ರಕಾರ, ಅವರ ಹೆಸರನ್ನು ದಿಲಾವರ್ ಖಾನ್ ಎಂದು ಬದಲಾಯಿಸಲಾಯಿತು. ದಾಖಲೆಗಳಲ್ಲಿ ಅದೇ ಹೆಸರಿನೊಂದಿಗೆ ಅವರು ಹೇಮಾ ಮಾಲಿನಿ ಅವರನ್ನು ವಿವಾಹವಾದರು. ಈ ಅವಧಿಯಲ್ಲಿ, ಸರ್ಕಾರಿ ದಾಖಲೆಗಳಲ್ಲಿ ಹೇಮಾ ಅವರ ಹೆಸರನ್ನು ಆಯೇಷಾ ಬಿ ಎಂದು ದಾಖಲಿಸಲಾಗಿದೆ.
https://www.newsics.com/2025/11/26/15-year-old-girl-loses-life-after-being-harassed-by-principal/