newsics.com
ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಭಾರತೀಯ ಟೆನಿಸ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ತಂಡವು 7-5, 6-2 ರಿಂದ ಸೋಲನ್ನು ಎದುರಿಸಿತು. ಬೆನ್ನಲ್ಲೇ ರೋಹನ್ ಬೋಪಣ್ಣ ಇದು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಎಂದಿದ್ದಾರೆ.
ಬೋಪಣ್ಣ 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ಇದು ನನ್ನ ವೃತ್ತಿಜೀವನದ ಕೊನೆಯ ಪಂದ್ಯಾವಳಿ. ಆಟಗಾರನಾಗಿ ನಾನು ಎಲ್ಲಿಗೆ ತಲುಪಿದ್ದೇನೆ ಅಂತಾ ಅರ್ಥ ಮಾಡಿಕೊಂಡಿದ್ದೇನೆ. 20 ವರ್ಷಗಳಿಗೂ ಹೆಚ್ಚು ಕಾಲ ಟೆನಿಸ್ನಲ್ಲಿ ಉನ್ನತ ಮಟ್ಟ ತಲುಪಿದ್ದೆ. ನನ್ನ ಐತಿಹಾಸಿಕ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.