Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಮನಗರ: ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟು ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಅದೃಷ್ಣವಶಾತ್ ಉದ್ದೇಶ ವಿಫಲವಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ನಡೆದಿದೆ.
ಹಳಿಯ ಮೇಲೆ ಇಡಲಾಗಿದ್ದ ಕಬ್ಬಿಣದ ರಾಡ್ ಇಂಜಿನ್ಗೆ ಬಡಿದಿದ್ದು, ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಅರ್ಧದಲ್ಲೇ ನಿಂತಿದೆ. ಬಳಿಕ ಬದಲಿ ಇಂಜಿನ್ ವ್ಯವಸ್ಥೆ ಮಾಡಲಾಗಿದ್ದು, ರೈಲು ಬೆಂಗಳೂರು ಕಡೆ ತೆರಳಿದೆ.
ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ವೈಫಲ್ಯ ಎದುರಾಗಿದೆ. ಇದರ ಪರಿಣಾಮ ಸುಮಾರು ಎರಡು ಗಂಟೆಯಿಂದ ರೈಲು ಕೆಟ್ಟು ನಿಂತಿತ್ತು.
ಬರೋಬ್ಬರಿ 2 ಗಂಟೆಯಿಂದ ಪ್ರಯಾಣಿಕರು ಪರದಾಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ರೈಲ್ವೇ ಪೊಲೀಸರು ಭೇಟಿ ನೀಡಿದ್ದಾರೆ, ಇತ್ತ ತಾಂತ್ರಿಕ ಸಿಬ್ಬಂದಿಗಳ ಪ್ರಯತ್ನದಿಂದ ಬೇರೆ ಎಂಜಿನ್ ಸಹಾಯದಲ್ಲಿ ಬೆಂಗಳೂರಿನತ್ತ ರೈಲು ಹೊರಟಿದೆ.