Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸದ್ಯದಲ್ಲೇ ಬರಲಿದೆ ಹೆಸರು, ನಂಬರ್, ವಿಳಾಸ ಮರೆಮಾಚಿರುವ ಅಧಾರ್ ಕಾರ್ಡ್. ಈ ಬಗ್ಗೆ ಸರ್ಕಾರ ಮಾಡಿರುವ ಪ್ರಸ್ತಾಪದ ಪ್ರಕಾರ ಆಧಾರ್ ಕಾರ್ಡ್ನಲ್ಲಿ ವ್ಯಕ್ತಿಯ ಹೆಸರು, ವಿಳಾಸ ಕಾಣದಂತೆ ಮಾಡಲಾಗುತ್ತದೆ. ಆಧಾರ್ ನಂಬರ್ ಕೂಡ ಕಾರ್ಡ್ನಲ್ಲಿ ಕಾಣೋದಿಲ್ಲ. ಆ ಕಾರ್ಡ್ನಲ್ಲಿ ಕೇವಲ ವ್ಯಕ್ತಿಯ ಫೋಟೋ ಮತ್ತು ಕ್ಯುಆರ್ ಕೋಡ್ ಮಾತ್ರ ಕಾಣುವಂತೆ ಇರುತ್ತದೆ. ಇಂಥದ್ದೊಂದು ಕ್ರಮ ಜಾರಿಗೆ ತರಲು ಯುಐಡಿಎಐ ಚಿಂತಿಸಿದೆ.
ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ ವಿವರ ಇರುತ್ತದೆ. ಇದನ್ನು ದುರುಪಯೋಗಪಡಿಸುವ ಅವಕಾಶ ಇಲ್ಲದಿಲ್ಲ. ಇದನ್ನು ತಪ್ಪಿಸಲು ಯುಐಡಿಎಐ ಈ ಪ್ಲಾನ್ ಮಾಡಿದೆ. ವರದಿಗಳ ಪ್ರಕಾರ ಮುಂದಿನ ತಿಂಗಳೇ (ಡಿಸೆಂಬರ್) ಹೊಸ ಆಧಾರ್ ಕಾರ್ಡ್ ವಿತರಣೆ ಕಾರ್ಯ ಶುರುವಾಗಬಹುದು.
ಈ ಹೊಸ ಆಧಾರ್ ಕಾರ್ಡ್ ಜಾರಿ ಬಂದ ಬಳಿಕ ಆಫ್ಲೈನ್ ಆಧಾರ್ ವರಿಫಿಕೇಶನ್ ಅನ್ನು ತಪ್ಪಿಸಬಹುದು. ಹಲವೆಡೆ ಗುರುತಿನ ದಾಖಲೆಯಾಗಿ ಆಧಾರ್ ಅನ್ನು ಪಡೆಯಲಾಗುತ್ತದೆ. ಇನ್ಮುಂದೆ ಅಂಥದ್ದು ಸಾಧ್ಯವಾಗುವುದಿಲ್ಲ. ಆನ್ಲೈನ್ನಲ್ಲೇ ಆಧಾರ್ ವೆರಿಫಿಕೇಶನ್ ಮಾಡಲು ಅವಕಾಶ ಇರುತ್ತದೆ. ಸರ್ಕಾರದಿಂದ ಅನುಮತಿ ಪಡೆದಿರುವ ಸಂಸ್ಥೆಗಳು ಮಾತ್ರವೇ ಆನ್ಲೈನ್ನಲ್ಲಿ ಆಧಾರ್ ವೆರಿಫಿಕೇಶನ್ ಮಾಡಬಹುದು. ಹೀಗಾಗಿ, ಹೊಸ ಆಧಾರ್ ಅನ್ನು ದುರ್ಬಳಕೆ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.