Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯ ಟಾಸ್ಕ್ವೊಂದರ ವೇಳೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿ ನಟನ ಮಾತುಗಳಿಂದ ನೊಂದ ಅಶ್ವಿನಿ, ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಾರೆ.
ಡ್ರಮ್ಗೆ ನೀರು ತುಂಬಿಸುವ ಟಾಸ್ಕ್ವೊಂದನ್ನು ಬಿಗ್ ಬಾಸ್ ಎರಡು ತಂಡಗಳಿಗೆ ನೀಡಿದ್ದಾರೆ. ಈ ಚಟುವಟಿಕೆಯ ಉಸ್ತುವಾರಿಯನ್ನು ಅಶ್ವಿನಿ – ಗಿಲ್ಲಿ ಅವರಿಗೆ ನೀಡಿದ್ದಾರೆ. ಆದರೆ ಉಸ್ತುವಾರಿ ವಹಿಸಿಕೊಳ್ಳಬೇಕಿದ್ದವರ ನಡುವೆಯೇ ಮಾತಿನ ಚಕಮಕಿ ನಡೆದಿದೆ.
ಗಿಲ್ಲಿ ಅವರು ನಿರ್ಧಾರವೊಂದರ ವಿಚಾರದಲ್ಲಿ ಹೀಗೆ ಮಾಡುವ ಹಾಗಿಲ್ಲವೆಂದಿದ್ದಾರೆ. ಇದಕ್ಕೆ ಅಶ್ವಿನಿ ಅವರು ಕರೆಕ್ಟಾಗಿ ಉಸ್ತುವಾರಿ ಮಾಡು ಎಂದಿದ್ದಾರೆ. ʼನೀನು ಕರೆಕ್ಟಾಗಿ ಮಾಡುʼ ಎಂದು ಗಿಲ್ಲಿ ಹೇಳಿದ್ದಾರೆ. ಈ ಮಾತನ್ನು ಕೇಳಿ ಅಶ್ವಿನಿ, ʼನೀನ್ಯಾರು ನೀನು – ತಾನು ಹೇಳೋಕೆ, ನಿನ್ನ ವ್ಯಕ್ತಿತ್ವ ಏನು ಅಂತ ಗೊತ್ತು ಬಿಡು. ನನ್ನ ಹತ್ರ ಇಟ್ಕೋ ಬೇಡ. ನಿನ್ನ ಯೋಗ್ಯತೆಗೆ ಇಷ್ಟುʼ ಎಂದು ಗರಂ ಆಗಿದ್ದಾರೆ.
ನೀನು ಸಮ್ಮನೆ ಇರಮ್ಮ, ವಟವಟ ಎನ್ನುತ್ತಾ, ಬಿಪಿ ಹೈ ಮಾಡ್ಕೊಂಡು ಎಂದು ಗಿಲ್ಲಿ ಅಶ್ವಿನಿಗೆ ಹೇಳಿದ್ದಾರೆ. ಇನ್ನು ಗಿಲ್ಲಿಯ ಮಾತನ್ನು ಕೇಳಿ ಅಶ್ವಿನಿ ಗೌಡ ಅವರು ಕಣ್ಣೀರು ಹಾಕಿದ್ದಾರೆ. ಇವನು ಯಾರು ನಮ್ಮನ್ನು ಈ ರೀತಿ ಮಾತನಾಡಿಸೋಕೆ. ಒಬ್ಬ ಕಾಮಿಡಿಯನ್ ಆಗಿ ಒಬ್ಬರನ್ನು ತೇಜೋವಧೆ ಮಾಡೋದು ಸರಿನಾ? ನಮ್ಮನ್ನು ಅಷ್ಟು ಅಗೌರವ ಕೊಡುತ್ತಿದ್ರೆ. ಆ ಜಾಗದಲ್ಲಿ ಒಂದು ಸೆಕೆಂಡ್ ನಿಲ್ಲೋಕೆ ಆಗಲ್ಲ. ನಾವು ಬದುಕುತ್ತಾ ಇರೋದೆ ನಾವು ಮಾರ್ಯದೆ ಎಂದು ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ.
ಜಾನ್ವಿ, ಧನುಷ್ ಅವರು ಅಶ್ವಿನಿ ಅವರನ್ನು ಸಮಾಧಾನ ಪಡಿಸಿದ್ದಾರೆ.
https://www.instagram.com/reel/DRMPoEiAdx8/?igsh=MWk0eWMxeGpldTBuZA==