Subscribe ನ್ಯೂಸಿಕ್ಸ್ ಕನ್ನಡ NewsicsKannada / YouTube
newsics.com
ನವದೆಹಲಿ: ಇಲ್ಲಿನ ಐತಿಹಾಸಿಕ ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಪೋಟದಂತೆಯೆ ದೇಶದ ವಿವಿಧೆಡೆ ಸ್ಫೋಟ ನಡೆಸಲು 32 ಕಾರುಗಳಲ್ಲಿ ಬಾಂಬ್ ಇರಿಸಲಾಗಿತ್ತು ಎಂದು ವರದಿಯಾಗಿದೆ.
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಹಲವು ಅಂಶಗಳನ್ನು ತನಿಖಾ ಸಂಸ್ಥೆ ಬಹಿರಂಗ ಮಾಡುತ್ತಿದೆ.
ಕಳೆದ ಸೋಮವಾರ ಸಂಜೆ ವೇಳೆಗೆ ಕೆಂಪುಕೋಟೆ ಮೆಟ್ರೋ ಸ್ಟೇಶನ್ ಬಳಿ ಐ20 ಕಾರಿನಲ್ಲಿ ಸ್ಫೋಟವಾಗಿತ್ತು.
ಮಾರುತಿ ಸುಜುಕಿ ಬ್ರೆಝಾ, ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸ್ಫೋಟಕ ವಸ್ತುಗಳನ್ನು ಸಾಗಿಸಲು ಮತ್ತು ಬಾಂಬ್‌ಗಳನ್ನು ತಲುಪಿಸಲು ಸಿದ್ಧಪಡಿಸಲಾಗುತ್ತಿತ್ತು ಎಂದು ದೆಹಲಿ ಕೆಂಪು ಕೋಟೆ ಸ್ಫೋಟ ತನಿಖೆಯ ನಿಕಟ ಮೂಲಗಳನ್ನು ಉಲ್ಲೇಖಿಸಿ ಗುರುವಾರ ಎನ್‌ಡಿಟಿವಿ ವರದಿ ಮಾಡಿದೆ.
ಅಯೋಧ್ಯೆಯ 16 ನೇ ಶತಮಾನದ ಬಾಬರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್ 6 ರಂದು ಸೇಡು ತೀರಿಸಿಕೊಳ್ಳಲು ದೇಶದೆಲ್ಲೆಡೆ ಹಲವು ಸ್ಫೋಟಗಳನ್ನು ಮಾಡಲು ಈ ಗುಂಪು ಯೋಜನೆ ರೂಪಿಸಿತ್ತು. ಸೋಮವಾರ ಸಂಜೆ ಸ್ಫೋಟಗೊಂಡ ಹುಂಡೈ ಐ20 ಸೇರಿದಂತೆ ಈ ಕಾರುಗಳು ದೆಹಲಿಯಲ್ಲಿ ಆರು ಸ್ಥಳಗಳನ್ನು ಒಳಗೊಂಡಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಬೇಕಿದ್ದ ಸರಣಿ ‘ಸೇಡು’ ದಾಳಿಯ ಭಾಗವಾಗಬೇಕಿತ್ತು.
ಈ ಕಾರ್ಯಕ್ಕಾಗಿ ಬಳಸಲಾಗುತ್ತಿದ್ದ ನಾಲ್ಕು ಕಾರುಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಹಳೆಯ ಕಾರುಗಳಾದ ಇವುಗಳನ್ನು ಈಗಾಗಲೇ ಹಲವು ಬಾರಿ ಮರು ಮಾರಾಟ ಮಾಡಲಾಗಿತ್ತು.
ಪೊಲೀಸರಿಗೆ ಗುರುತು ಪತ್ತೆ ಮಾಡಲು ಕಷ್ಟವಾಗಬೇಕು ಎಂದು ಇಂತಹ ಕಾರುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೂ ನಾಲ್ಕು ಕಾರುಗಳನ್ನು ಪತ್ತೆ ಮಾಡಲಾಗಿದೆ.
ಫರಿದಾಬಾದ್ ನ ಅಲ್ ಫತೇಹ್ ಕ್ಯಾಂಪಸ್‌ನಲ್ಲಿ ಬ್ರೇಜಾ ಕಾರನ್ನು ಪತ್ತೆ ಮಾಡಲಾಗಿದೆ. ಈ ಉಗ್ರ ಮಾಡ್ಯೂಲ್‌ನ ಎಪಿಸೆಂಟರ್ ಆಗಿರುವ ಫರಿದಾಬಾದ್‌ನ ಮತ್ತೊಂದೆಡೆ ಇಕೊಸ್ಪೋರ್ಟ್ ಕಾರನ್ನು ಬುಧವಾರ ಪತ್ತೆ ಮಾಡಲಾಗಿದ್ದು, ಕಾರಿನ ಹಿಂದಿನ ಸೀಟಿನಲ್ಲಿ ಮಲಗಿದ್ದ ಯುವಕನನ್ನು ಬಂಧಿಸಲಾಗಿದೆ. ಆತನ ಗುರುತನ್ನು ಇದುವರೆಗೆ ಬಹಿರಂಗ ಮಾಡಿಲ್ಲ.
ಕಳೆದ ಸೋಮವಾರ ಡಿಸೈರ್ ಕಾರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ರೈಫಲ್ ಮತ್ತು ಮದ್ದುಗುಂಡುಗಳನ್ನು ಪತ್ತೆ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ಬದರ್‌ಪುರ್ ಗಡಿಯಲ್ಲಿ ದೆಹಲಿಯನ್ನು ಪ್ರವೇಶಿಸಿದ್ದ ಐ20 ಕಾರು ಕೆಲ ಗಂಟೆ ಕಾಲ ನಗರದಲ್ಲಿ ಸಂಚರಿಸಿತ್ತು. ಸಂಜೆ 6.52ರ ಸಮಯಕ್ಕೆ ಕೆಂಪುಕೋಟೆಯ ಬಳಿ ಸ್ಫೋಟವಾಗಿತ್ತು. ಘಟನೆಯಲ್ಲಿ 13 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ.
Leopard attacks ಬನ್ನೇರುಘಟ್ಟ ಸಫಾರಿ ವೇಳೆ ಚೆನ್ನೈ ಮಹಿಳೆ ಮೇಲೆ ಚಿರತೆ ದಾಳಿ