Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube
newsics.com
ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.
ಚೆನ್ನೈ ಮೂಲದ ವಹಿತ ಬಾನು (50) ಮೇಲೆ ಚಿರತೆ ಅಟ್ಯಾಕ್ ಮಾಡಿದೆ.

ಪತಿ ಮತ್ತು ಮಗನ ಜತೆ ವಹಿತ ಬಾನು ಬನ್ನೇರುಘಟ್ಟ ಸಫಾರಿಗೆ ಬಂದಿದ್ದರು. KSTDC ವಾಹನದಲ್ಲಿ ಸಫಾರಿಗೆ ತೆರಳಿದ್ದು, ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು.
ಈ ವೇಳೆ ವಾಹನದ ಮೇಲೆ ಎಗರಿ ವಹಿತ ಬಾನು ಮೇಲೆ ಚಿರತೆ ದಾಳಿ ಮಾಡಿದೆ. ಕೈ ಪರಚಿದೆ. ಗಾಯಾಳು ಮಹಿಳೆಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.