Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ, ಇತ್ತೀಚಿನ ಗಂಡ-ಹೆಂಡತಿಯ ಸಂಸಾರ ಉಂಡು ಮಲಗುವ ವೇಳೆಗೆ ಆರಂಭವಾಗುತ್ತಿದೆ. ಹಗಲಿನಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವ ಜೋಡಿ, ಇಬ್ಬರೂ ಮನೆಗೆ ಬಂದು ರಾತ್ರಿ ಮಲಗುವಾಗ ಜಗಳ ಶುರು ಮಾಡುತ್ತಾರೆ. ಇಂತಹ ಅನೇಕ ಜೋಡಿಗಳ ಸಂಸಾರ ಬಹಳ ದಿನಗಳು ಮುಂದುವರಿಯದೇ ಅರ್ಧಕ್ಕೆ ಡಿವೋರ್ಸ್ ಪಡೆದು ಅಂತ್ಯವಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ.
ಹೆಂಡ್ತಿಗೆ ವಿಮಾನಕ್ಕಿಂತ ಕಾಫಿ ಇಂಪಾರ್ಟೆಂಟ್ ಆಯ್ತು ಎನ್ನುವ ಕಾರಣಕ್ಕೆ ಪತಿಯೊಬ್ಬ ಹೆಂಡ್ತಿಯನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟು ವಿಮಾನ ಏರಿದ್ದ. ಸಾರ್ವಜನಿಕ ಸಾರಿಗೆ ನಮಗೆ ಕಾಯೋದಿಲ್ಲ. ನಾವು ಅದ್ರ ಟೈಂಗೆ ಅಲ್ಲಿರ್ಬೇಕು. ಸರಿಯಾದ ಸಮಯಕ್ಕೆ ನಿಲ್ದಾಣಕ್ಕೆ ಹೋಗ್ಬೇಕು ಅನ್ನೋ ಟೆನ್ಷನ್ ನಲ್ಲಿ ಮನೆಯಲ್ಲಿ ಗಡಿ ಬಿಡಿ ಸಾಮಾನ್ಯ. ಪತಿ – ಪತ್ನಿ ಮಧ್ಯೆ ಪ್ರವಾಸದ ಟೈಂನಲ್ಲಿ ಇಂಥ ಜಗಳ ಕಾಮನ್ ಆಗಿರುತ್ತೆ. ಬ್ಯಾಗ್ ದೊಡ್ಡದಾಯ್ತು, ರೆಡಿಯಾಗೋದು ಲೇಟ್ ಆಯ್ತು, ಸಣ್ಣ ಜಗಳವೇ ಮುಂದೆ ದೊಡ್ಡ ಗಲಾಟೆಗೆ ಕಾರಣವಾಗುತ್ತೆ. ಇದಕ್ಕೆ ಬ್ರೇಕ್ ನೀಡಲು ಈ ಕಾಲದ ದಂಪತಿ ಶುರು ಮಾಡಿದ್ದೇ ಈ ಏರ್ಪೋರ್ಟ್ ಡಿವೋರ್ಸ್.
ಬ್ರಿಟಿಷ್ ಬರಹಗಾರ ಹಗ್ ಆಲಿವರ್, ಏರ್ ಪೋರ್ಟ್ ಡಿವೋರ್ಸ್ ಹೆಸರನ್ನು ಮೊದಲು ಪರಿಚಯ ಮಾಡಿದ್ರು. ಮೊದಲೇ ಹೇಳಿದಂಗೆ ಇದು ಶಾಶ್ವತವಾಗಿ ದಂಪತಿ ದೂರ ಆಗೋದಲ್ಲ. ತಾತ್ಕಾಲಿಕವಾಗಿ ಬೇರೆ ಆಗೋದು. ಸಂಬಂಧವನ್ನು ಬಲಪಡಿಸಲು ಇದು ಹೆಲ್ಪ್ ಮಾಡುತ್ತೆ. ಏರ್ಪೋರ್ಟ್ ಡಿವೋರ್ಸ್ ನಲ್ಲಿ, ಸೆಕ್ಯೂರಿಟಿ ಚೆಕ್ ನಂತರ ದಂಪತಿ ಬೇರೆ ಆಗ್ತಾರೆ. ಏರ್ ಪೋರ್ಟ್ ನಲ್ಲಿ ಸ್ವಲ್ಪ ಸಮಯ ಇಬ್ಬರೂ ದೂರ ಇರ್ತಾರೆ. ವಿಮಾನ ಹತ್ತುತ್ತಿದ್ದಂತೆ ಮತ್ತೆ ಹತ್ತಿರವಾಗ್ತಾರೆ.
ಸ್ವಲ್ಪ ಸಮಯದ ಈ ಅಂತರ ಸಂಬಂಧವನ್ನು ಬಲಪಡಿಸುತ್ತೆ ಅಂದ ಹಗ್ ಆಲಿವರ್ ಹೇಳಿದ್ರು. ದಿ ಟೈಮ್ಸ್ ನಲ್ಲಿ ಹಗ್ ಆಲಿವರ್, ತಾವು ಅನುಸರಿಸಿದ ವಿಧಾನವನ್ನು ಬರೆದಿದ್ದರು. ಇದು ಸೋಶಿಯಲ್ ಮೀಡಿಯಾ ಹಾಗೂ ಪೇಪರ್ ನಲ್ಲಿ ಪ್ರಸಿದ್ಧಿಗೆ ಬಂತು. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಇದನ್ನು ಫಾಲೋ ಮಾಡಿದ್ರು. ಆದ್ರೆ ಫಲಿತಾಂಶ ವರ್ಕ್ ಆಗಿತ್ತು. ಒತ್ತಡ ಕಡಿಮೆ ಮಾಡಲು ಇದು ಸಹಾಯ ಮಾಡಿತ್ತು. ಹಾಗಾಗಿ ದಿನ ಕಳೆದಂತೆ ಇದು ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅಮೇರಿಕನ್ ಟಿವಿ ನಿರೂಪಕಿ ಕೆಲ್ಲಿ ರಿಪಾ ಕೂಡ ತಮ್ಮ ಗಂಡನಿಗೆ ಈ ಏರ್ಪೋರ್ಟ್ ಡಿವೋರ್ಸ್ ಬಗ್ಗೆ ಹೇಳಿದ್ದರು. ಅದನ್ನು ಅವರು ಫಾಲೋ ಕೂಡ ಮಾಡಿದ್ದರು. ಆನಂತರ ಇದಕ್ಕೆ ಮತ್ತಷ್ಟು ಪ್ರಸಿದ್ಧಿ ಸಿಕ್ಕಿದೆ.
https://www.newsics.com/2025/11/13/delhi-mysterious-blast-umar-nabi-detonated-the-bomb/