Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Militants arrest ದೇಶದಲ್ಲಿ ಕೆಮಿಕಲ್ ಬಾಂಬ್ ದಾಳಿಗೆ ಸಂಚು: ಮೂವರು ಐಸಿಸ್ ಉಗ್ರರ ಬಂಧನ
ದೇಶಪ್ರಮುಖವಿದೇಶ

Militants arrest ದೇಶದಲ್ಲಿ ಕೆಮಿಕಲ್ ಬಾಂಬ್ ದಾಳಿಗೆ ಸಂಚು: ಮೂವರು ಐಸಿಸ್ ಉಗ್ರರ ಬಂಧನ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕೆಮಿಕಲ್‌ ಬಾಂಬ್‌ ಬಳಸಿ ದೇಶಾದ್ಯಂತ ಸಮೂಹ ವಿನಾಶಕ್ಕೆ ಸಂಚು ರೂಪಿಸಿದ್ದ 3 ಉಗ್ರರನ್ನು ಗುಜರಾತ್‌ನ ಉಗ್ರ ನಿಗ್ರಹ ಪಡೆಯು (ಎಟಿಎಸ್‌) ಬಂಧಿಸಿದ್ದು, ಅವರಿಂದ ಮಾರಕಾಸ್ತ್ರ ವಶಪಡಿಸಿಕೊಂಡಿದೆ.

ಇದರೊಂದಿಗೆ ದೇಶವ್ಯಾಪಿ ನಡೆಯುಬಹುದಾಗಿದ್ದ ಬಹುದೊಡ್ಡ ಉಗ್ರ ಕೃತ್ಯವೊಂದನ್ನು ಯಶಸ್ವಿಯಾಗಿ ತಡೆದಿದೆ.

ಬಂಧಿತರು ಐಸಿಸ್‌ನ ಉಪವಿಭಾಗವಾಗಿರುವ ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಜತೆ ನಂಟು ಹೊಂದಿದ್ದು ಕಂಡುಬಂದಿದೆ.

ಬಂಧಿತರಲ್ಲಿ ಒಬ್ಬನಾದ ಹೈದರಾಬಾದ್‌ ಮೂಲದ ಅಹ್ಮದ್‌ ಮೊಹಿಯುದ್ದಿನ್‌ ಸೈಯದ್‌, ಚೀನಾದಿಂದ ಎಂಬಿಬಿಎಸ್‌ ಪದವಿ ಪಡೆದಿದ್ದ. ಆತ, ತನ್ನ ವೈದ್ಯ ಜ್ಞಾನ ಬಳಸಿಕೊಂಡು ರೈಸಿನ್‌ ಎಂಬ ವಿಷ ತಯಾರಿಸಿದ್ದ. ಇನ್ನಿಬ್ಬರನ್ನು ಉತ್ತರಪ್ರದೇಶದ ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ. ಇವರಿಬ್ಬರು ಲಖನೌ, ದೆಹಲಿ. ಅಹಮದಾಬಾದ್‌ನಲ್ಲಿ ತಿರುಗಾಡಿ ಹಲವು ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇವರೆಲ್ಲ ಶಸ್ತ್ರಾಸ್ತ್ರ ವಿನಿಮಯಕ್ಕಾಗಿ ಉತ್ತರಪ್ರದೇಶದಿಂದ ಗುಜರಾತ್‌ಗೆ ಬಂದಿದ್ದರು ಎನ್ನಲಾಗಿದೆ.

ಡಾ। ಸೈಯದ್‌ ದೊಡ್ಡ ಉಗ್ರ ದಾಳಿಗೆ ಸಂಚು ರೂಪಿಸಿದ್ದು, ಇದಕ್ಕಾಗಿ ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿದ್ದ ಮತ್ತು ಹಣ ಸಂಗ್ರಹಿಸುತ್ತಿದ್ದ. ಇವರಿಗೆ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಗಡಿಯಿಂದ ಡ್ರೋನ್‌ಗಳ ಮೂಲಕ ಕಳಿಸಲಾಗುತ್ತಿತ್ತು ಎಂದು ಎಟಿಎಸ್‌ನ ಪೊಲೀಸ್ ಉಪ ಮಹಾನಿರೀಕ್ಷಕ ಸುನಿಲ್‌ ಜೋಶಿ ಹೇಳಿದ್ದಾರೆ.

ಬಂಧಿತರಿಂದ 2 ಗ್ಲೋಕ್‌ ಪಿಸ್ತೂಲು, ಬೆರೆಟ್ಟಾ ಪಿಸ್ತೂಲು, 30 ಸಿಡಿಮದ್ದು, 4 ಲೀಟರ್‌ ಹರಳೆಣ್ಣೆ, 3 ಮೊಬೈಲ್‌, 2 ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ.

ರೈಸಿನ್‌ ಪುಡಿಯು ಹರಳೆಣ್ಣೆ ಬೀಜದಿಂದ ಸಿಗುವ ವಿಷಕಾರಿ ಉಪವಸ್ತು. ಇದನ್ನು ಸಮೂಹ ಹತ್ಯಾಕಾಂಡ ನಡೆಸಲು ಸಮಾಜಘಾತಕ ಶಕ್ತಿಗಳು ಬಳಸುತ್ತವೆ. ಈ ಪುಡಿಯನ್ನು ನೀರಿನ ಮೂಲಗಳಿಗೆ ಭಾರೀ ಪ್ರಮಾಣದಲ್ಲಿ ಬೆರೆಸಿದರೆ, ಅದನ್ನು ಸೇವಿಸಿದವರು ಸಾವನ್ನಪ್ಪುತ್ತಾರೆ. ಆದರೆ ಹೀಗೆ ಮಾಡುವುದು ಸುಲಭವಿಲ್ಲ. ಈ ಪುಡಿ ಗಾಳಿಯ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿದರೂ ಜನ ಸಾವನ್ನಪ್ಪುವ ಸಾಧ್ಯತೆಯಿದೆ.

ಜೈಲಿನಲ್ಲೇ ಮದ್ಯ ಸೇವಿಸಿ ಕೈದಿಗಳಿಂದ ನೃತ್ಯ​ -ವಿಡಿಯೋ ವೈರಲ್

TAGGED:Three ISIS terrorists arrested for plotting chemical bomb attack in the country
Share This Article
Facebook Twitter Copy Link Print
Previous Article Viral ಒಂದು ಗಂಟೆಯಾದರೂ ಕಾಫಿ ನೀಡದಿದ್ದಕ್ಕೆ ಸಿಬ್ಬಂದಿ ಮೇಲೆ ಬಿಸಿ ಕಾಫಿ ಎರಚಿದ ಮಹಿಳೆ – ವೈರಲ್ ವಿಡಿಯೋ ನೋಡಿ
Next Article Tamil actor Abhinay passes away ತಮಿಳಿನ ಖ್ಯಾತ ನಟ ಅಭಿನಯ್ ನಿಧನ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?