newsics.com
ತಿಹಾರ್ ಜೈಲ್ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದೆ. ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳು ಹೆಚ್ಐವಿ ಎಂಬ ಜೀವ ಕಂಟಕ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಿಹಾರ್ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೇಸ್ಗಳು ಹೊಸದೇನಲ್ಲ. ಅಲ್ಲಿರುವ 200 ಕೈದಿಗಳಲ್ಲಿ ಲೈಂಗಿಕತೆಗೆ ಸಂಬಂಧಿತ ರೋಗಗಳು ಇರೋದು ಗೊತ್ತಾಗಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ.
ತಿಹಾರ್ ಜೈಲಿನಲ್ಲಿ ಆಗಾಗ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅದರಲ್ಲೂ ತಿಹಾರ್ ಜೈಲಿಗೆ ನೂತನ ಡಿಜಿಯಾಗಿ ಸತೀಶ್ ಗೋಲಾಚ್ ಅವರು ಅಧಿಕಾರವಹಿಸಿಕೊಂಡ ಬಳಿಕ ಇದೇ ಮೇ ಹಾಗೂ ಜೂನ್ನಲ್ಲಿ 10, 500 ಜನ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಲಾಗಿತ್ತು. ಇದರಲ್ಲಿ ಹೆಚ್ಐವಿ ಪರೀಕ್ಷೆಯೂ ಕೂಡ ಇತ್ತು. ಮೆಡಿಕಲ್ ಸ್ಕ್ರೀನಿಂಗ್ ಬಳಿಕ ಒಟ್ಟು 125 ಕೈದಿಗಳಲ್ಲಿ ಹೆಚ್ಐವಿ ಪಾಸಿಟಿವ್ ಇರೋದು ಕಂಡು ಬಂದಿವೆ.