newsics.com
ಪ್ಯಾರಿಸ್: ಭಾರತದ ಬಹುತೇಕ ಶೂಟರ್‌ಗಳು ಶನಿವಾರ ನಿರಾಸೆ ಮೂಡಿಸಿದರೂ, ಸ್ಟಾರ್ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಮನು ಭಾಕರ್ ಅವರು ಅರ್ಹತಾ ಸುತ್ತಿನಲ್ಲಿ 600ಕ್ಕೆ 580 ಅಂಕಗಳನ್ನು ಸಂಪಾದಿಸಿ ಮೂರನೇ ಸ್ಥಾನಿಯಾಗಿ ಪದಕ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮ ಪಿಸ್ತೂಲ್ ಕೈಕೊಟ್ಟ ಕಾರಣ ಭಾಕರ್ ಫೈನಲ್‌ಗೇರಲು ವಿಫಲವಾಗಿದ್ದರು.
ಈ ಬಾರಿ ಪದಕ ನಿರೀಕ್ಷೆಯಲ್ಲಿರುವ 22 ವರ್ಷದ ಭಾಕರ್, ಇಂದು ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಇಂದು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
https://x.com/sportwalkmedia/status/1817165095417655764
ಮದುವೆಯಾಗಿ ವರ್ಷವಾದ್ರೂ ತನ್ನನ್ನು ಮುಟ್ಟದ ಐಆರ್‌ಎಸ್ ಅಧಿಕಾರಿ ಗಂಡನ ವಿರುದ್ಧ ಮಹಿಳೆ ದೂರು!