Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮುಟ್ಟಿನ ಸಮಯದಲ್ಲಿ ಬರುವ ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ವಸ್ತು ಬಳಸಿ
ಆರೋಗ್ಯಲೈಫ್‌ಸ್ಟೈಲ್

ಮುಟ್ಟಿನ ಸಮಯದಲ್ಲಿ ಬರುವ ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ವಸ್ತು ಬಳಸಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com

ಓಂಕಾಳು ಅಥವಾ ಅಜ್ವೈನ್‌ ಅಥವಾ ಓಮು ಕಾಳು ಹೀಗೆ ನಾನಾ ಹೆಸರುಗಳಿಂದ ಪ್ರಸಿದ್ದವಾಗಿರುವ ಸುಗಂಧಭರಿತ ಮಸಾಲೆಯಾಗಿದೆ. ಸಾಮಾನ್ಯವಾಗಿ ಇದು ಎಲ್ಲರಿಗೂ ಚಿರಪರಿಚಿತ. ಹಾಗಾಗಿ ಇದರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿರುವುದಿಲ್ಲ. ಇದು ಅಡುಗೆಗೆ ಮಾತ್ರವಲ್ಲ ಇದರಲ್ಲಿನ ಹಲವು ಔಷಧೀಯ ಗುಣಗಳು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಯಥೇಚ್ಛವಾಗಿ ಬಳಕೆಯಾಗುತ್ತದೆ.
ಓಂ ಕಾಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಇದರಲ್ಲಿ ನಿಯಾಸಿನ್, ಥಯಾಮಿನ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಉತ್ತಮ ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್ ಅಂಶಗಳಿವೆ. ಹಾಗಾಗಿ ಇದರ ನೀರಿನ ಸೇವನೆ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ವಾಮ್ ಕಾಳು ಅಥವಾ ಓಂ ಕಾಳು ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯಮಿತವಾಗಿ ಓಂ ಕಾಳಿನ ನೀರನ್ನು ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು.
ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಓಂ ಕಾಳು ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ.
ಈ ಓಂ ಕಾಳು ನೀರು ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
ಓಂ ಕಾಳು ಪುಡಿಯನ್ನು ಅರ್ಧ ಕಪ್ ನೀರಿನಲ್ಲಿ ಒಂದು ಕಪ್ ಆಗುವ ವರೆಗೆ ಕುದಿಸಿ. ನಿಯಮಿತವಾಗಿ ಫಿಲ್ಟರ್ ಮಾಡಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಬೆಚ್ಚಗಿನ ನೀರಿನಲ್ಲಿ ಓಂ ಕಾಳಿನ ಪುಡಿಯ ಮಿಶ್ರಣವನ್ನು ಬೆರೆಸಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ವಾಕರಿಕೆ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಓಂ ಕಾಳಿನ ನೀರು ಹೊಟ್ಟೆ ಉಬ್ಬುವಿಕೆಯನ್ನು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ನಿಯಮಿತವಾಗಿ ಈ ನೀರಿನ ಸೇವನೆ ಮಾಡುವುದರಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಓಂ ಕಾಳಿನ ಪುಡಿ ಲಭ್ಯವಿಲ್ಲದ ಸಂದರ್ಭದಲ್ಲಿ ಓಂ ಕಾಳನ್ನು ನೇರವಾಗಿ ಸೇವನೆ ಮಾಡಬಹುದು.
ಓಂ ಕಾಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಶೇಖರಿಸಿಟ್ಟುಕೊಂಡಲ್ಲಿ, ಹಲ್ಲುನೋವು ಬಂದಾಗ ಅರ್ಧ ಚಮಚ ಓಂ ಕಾಳಿನ ಪುಡಿಗೆ ಸ್ವಲ್ಪ ಆಲಿವ್ ಎಣ್ಣೆ ಮತ್ತು ಬೆಚ್ಚಗಿನ ನೀರಿಗೆ ಅದನ್ನು ಬೆರೆಸಿ ಸೇವನೆ ಮಾಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಬಾಯಿಯ ದುರ್ವಾಸನೆಯೂ ಕೂಡ ನಿವಾರಣೆಯಾಗುತ್ತದೆ.

ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು

TAGGED:Use this remedy to get rid of nausea and stomach pain during menstruation.
Share This Article
Facebook Twitter Copy Link Print
Previous Article ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು
Next Article ಬಾಲಿವುಡ್ನ ಖ್ಯಾತ ನಟ, ಶೋಲೆ ಖ್ಯಾತಿಯ ಗೋವರ್ಧನ್ ಅಸ್ರಾನಿ ನಿಧನ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?